ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಭಾರೀ ಮಳೆ ಮುಂದುವರಿಯಲಿದೆ.
ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಹಾಗೂ ದಕ್ಷಿಣ ಒಳನಾಡಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ಕೊಡಗು, ರಾಮನಗರ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-19
ಮಂಗಳೂರು: 28-25
ಶಿವಮೊಗ್ಗ: 26-22
ಬೆಳಗಾವಿ: 24-21
ಮೈಸೂರು: 27-21
ಮಂಡ್ಯ: 27-21
ಕೊಡಗು: 21-18
ರಾಮನಗರ: 28-21
ಹಾಸನ: 24-19
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 26-19
ಕೋಲಾರ: 28-21
ತುಮಕೂರು: 27-21
ಉಡುಪಿ: 28-25
ಕಾರವಾರ: 27-26
ಚಿಕ್ಕಮಗಳೂರು: 23-19
ದಾವಣಗೆರೆ: 27-22
ಚಿತ್ರದುರ್ಗ: 27-21
ಹಾವೇರಿ: 26-22
ಬಳ್ಳಾರಿ: 29-23
ಗದಗ: 26-21
ಕೊಪ್ಪಳ: 27-22
ರಾಯಚೂರು: 28-23
ಯಾದಗಿರಿ: 27-23
ವಿಜಯಪುರ: 27-22
ಬೀದರ್: 24-21
ಕಲಬುರಗಿ: 27-22
ಬಾಗಲಕೋಟೆ: 27-23