ರಾಜ್ಯದಲ್ಲಿ ಮುಂಗಾರು ಕೊಂಚ ಚುರುಕುಗೊಂಡಿದ್ದು, ವಿವಿಧೆಡೆ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಜು.1 ಮತ್ತು 4ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹಾಗೂ ಜು.1 ಮತ್ತು 7ರವರೆಗೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮುಂಗಾರು ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. #KSNDMC #ಎಚ್ಚರಿಕೆವಹಿಸಿ
Next 5 days #SouthwestMonsoon #Rainfall #forecast maps for #Karnataka state with district-wise warnings.
Source: @Indiametdept @KarnatakaVarthe #KarnataKaRains pic.twitter.com/BawWAbwjF5— Karnataka State Natural Disaster Monitoring Centre (@KarnatakaSNDMC) July 1, 2026
ನಗರಗಳ ಹವಾಮಾನ ವರದಿ:
ಬೆಂಗಳೂರು: 26-21
ಮಂಗಳೂರು: 26-24
ಶಿವಮೊಗ್ಗ: 24-22
ಬೆಳಗಾವಿ: 24-22
ಮೈಸೂರು: 26-22

ಮಂಡ್ಯ: 27-22
ಮಡಿಕೇರಿ: 22-21
ರಾಮನಗರ: 27-22
ಹಾಸನ: 23-21
ಚಾಮರಾಜನಗರ: 27-23
ಚಿಕ್ಕಬಳ್ಳಾಪುರ: 26-21

ಕೋಲಾರ: 27-22
ತುಮಕೂರು: 26-22
ಉಡುಪಿ: 26-25
ಕಾರವಾರ: 27-26
ಚಿಕ್ಕಮಗಳೂರು: 21-19
ದಾವಣಗೆರೆ: 26-23

ಹುಬ್ಬಳ್ಳಿ: 24-22
ಚಿತ್ರದುರ್ಗ: 25-22
ಹಾವೇರಿ: 26-23
ಬಳ್ಳಾರಿ: 29-23
ಗದಗ: 29-22
ಕೊಪ್ಪಳ: 28-24

ರಾಯಚೂರು: 32-26
ಯಾದಗಿರಿ: 31-25
ವಿಜಯಪುರ: 29-24
ಕಲಬುರಗಿ: 29-24
ಬಾಗಲಕೋಟೆ: 29-24

