ಬೆಂಗಳೂರು: ರಾಜ್ಯದಲ್ಲಿ ಇಂದು 198 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮರಣ ಪ್ರಮಾಣ 0.86% ಆಗಿದೆ.
Advertisement
348 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು 7,418 ಸಕ್ರಿಯ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 38 ಮಂದಿಗೆ ಓಮಿಕ್ರಾನ್ ಸೋಂಕು ಬಂದಿದೆ.
Advertisement
ರಾಜ್ಯದಲ್ಲಿ ಒಟ್ಟು 30,04,587 ಮಂದಿಗೆ ಕೊರೊನಾ ಬಂದಿದೆ. 29,58,828 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪಾಸಿಟಿವಿಟಿ ರೇಟ್ ಶೇ.0.47 ರಷ್ಟಿದೆ. ಬೆಂಗಳೂರಿನಲ್ಲಿ 248 ಮಂದಿಗೆ ಪಾಸಿಟಿವ್ ಬಂದಿದ್ದು, 2 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಶ್ಚಿಮಘಟ್ಟಗಳ ವ್ಯಾಪ್ತಿಯ ಅರಣ್ಯ ಒತ್ತುವರಿ ತೆರವುಗೊಳಿಸಿ: ರವಿಕುಶಾಲಪ್ಪ ಸೂಚನೆ
Advertisement
Advertisement
ರಾಜ್ಯದಲ್ಲಿ ಇಂದು ಒಟ್ಟು 33,346 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 73,894 ಸ್ಯಾಂಪಲ್ (ಆರ್ಟಿ-ಪಿಸಿಆರ್ 56,921 + 14,973 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 8, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 248, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 8, ದಾವಣಗೆರೆ 2, ಧಾರವಾಡ 6, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 0, ಕೊಡಗು 18, ಕೋಲಾರ 6, ಕೊಪ್ಪಳ 0, ಮಂಡ್ಯ 5, ಮೈಸೂರು 6, ರಾಯಚೂರು 0, ರಾಮನಗರ 0, ಶಿವಮೊಗ್ಗ 1, ತುಮಕೂರು 11, ಉಡುಪಿ 3, ಉತ್ತರ ಕನ್ನಡ 11, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.