ನವದೆಹಲಿ: ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಬ್ (Hijab) ನಿಷೇಧಿಸಿದ ಹೈಕೋರ್ಟ್ (High Court) ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ (Supreme Court) ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಡೆಗೂ ಅಂತ್ಯವಾಗಿದೆ. ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.
Advertisement
ಇಂದು ಬೆಳಗ್ಗೆ ವಿಚಾರಣೆ ಆರಂಭವಾಗುತ್ತಲೇ ಅರ್ಜಿದಾರರ ವಕೀಲ ಹುಜೇಫ್ ಅಹ್ಮದ್ ಮತ್ತೆ ವಾದ ಮಂಡಿಸಲು ನಿಂತರು. ಇದಕ್ಕೆ ಅಸಹನೆ ವ್ಯಕ್ತಪಡಿಸಿದ ನ್ಯಾಯಪೀಠ, ಬೇಗ ವಾದ ಮುಗಿಸಿ. ನಾವು ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 9 ದಿನಗಳಿಂದ ಕೇಳ್ತಾನೆ ಇದೀವಿ. ಇವತ್ತು ಒಂದು ಗಂಟೆಯಷ್ಟೇ ಟೈಂ ಕೊಡ್ತೀವಿ. ಅಷ್ಟರಲ್ಲಿ ಅರ್ಜಿದಾರರ ಪರ ವಕೀಲರು ವಾದ ಮುಗಿಸಬೇಕು. ವಾದಗಳು ಮಿತಿಮೀರುತ್ತಿವೆ ಎಂದು ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೀತು. ಇದನ್ನೂ ಓದಿ: ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್‍ನ ಲೈಸನ್ಸ್ ರದ್ದುಪಡಿಸಿದ RBI
Advertisement
Advertisement
ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ, ಸಾಲಿಸಿಟರ್ ಜನರಲ್ ಪಿಎಫ್‍ಐ ಹೆಸರು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಕೊನೆಗೆ ನಾವು ನಿಮ್ಮೆಲ್ಲರ ವಾದ ಆಲಿಸಿದ್ದೇವೆ. ಈಗ ನಮ್ಮ ಹೋಂವರ್ಕ್ ಶುರುವಾಗುತ್ತದೆ. ಧನ್ಯವಾದ ಎಂದು ನ್ಯಾಯಮೂರ್ತಿಗಳು ಪೀಠದಿಂದ ಎದ್ದರು. ಈ ಹತ್ತು ದಿನದಲ್ಲಿ ಅರ್ಜಿದಾರರ ಪರ 21 ವಕೀಲರು, ಸರ್ಕಾರದ ಪರ ಐವರು ವಕೀಲರು ಸುದೀರ್ಘ ವಾದ ಮಂಡಿಸಿದರು. ಇದನ್ನೂ ಓದಿ: ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!