CrimeLatestLeading NewsMain PostNational

ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!

ಚಂಡೀಗಢ: ಆಮ್ ಆದ್ಮಿ ಪಾರ್ಟಿ (AAP) ಯ ಶಾಸಕ ಲಾಭ್ ಸಿಂಗ್ ಉಗೋಕೆಯವರ ತಂದೆ ಆತ್ಮಹತ್ಯೆಗೆ ಯತ್ನಿಸಿದ ಅಚ್ಚರಿಯ ಘಟನೆಯೊಂದು ಇಂದು ಪಂಜಾಬ್‍ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತತ್ನಿಸಿದವರನ್ನು ದರ್ಶನ್ ಸಿಂಗ್ (Darshan Singh) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನು ಸ್ವತಃ ಪಂಜಾಬ್ (Punjab) ಶಾಸಕರೇ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ದರ್ಶನ್ ಸಿಂಗ್ ಅವರು ಇಂದು ಮಧ್ಯಾಹ್ನದ ಬಳಿಕ ವಿಷಯುಕ್ತ ಪದಾರ್ಥವನ್ನು ಸೇವಿಸಿದ್ದಾರೆ. ಪರಿಣಾಮ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದರ್ಶನ್ ಸಿಂಗ್ ಆತ್ಮಹತ್ಯೆಗೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಲಾಭ್ ಸಿಂಗ್ (Labh Singh Ugoke) ಅವರು ಪ್ರತಿಕ್ರಿಯಿಸಿ, ತಂದೆ ಬೆಳಗ್ಗಿನವರೆಗೆ ಚೆನ್ನಾಗಿಯೇ ಇದ್ದರು. ಆದರೆ ನಾನು ಸಚಿವ ಸಂಪುಟ ಸಭೆ (Cabinet Meeting) ಗೆಂದು ಚಂಢೀಗಢಕ್ಕೆ ಬಂದ ಬಳಿಕ ಏನಾಯ್ತೋ ಗೊತ್ತಿಲ್ಲ ಎಂದು ತಿಳಿಸಿರು.

ವರದಿಗಳ ಪ್ರಕಾರ, ದರ್ಶನ್ ಅವರ ಹಿರಿಯ ಸಹೋದರ ಸುಖಚೈನ್ ಸಿಂಗ್ ಅವರು ಕುಡಿತದ ದಾಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮನೆಯಲ್ಲಿ ಶಾಸಕರ ತಂದೆ ಜಗಳವಾಡಿದ್ದಾರೆ. ಇದಾದ ಬಳಿಕ ಅವರು ವಿಷಕಾರಿ ವಸ್ತುವೊಂದನ್ನು (Poisonous Substance) ಸೇವಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿಂದ ಅವರನ್ನು ಲೂಧಿಯಾನದ ಡಿಸಿಎಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸದ್ಯ ಶಾಸಕರ ತಂದೆಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

ಶಾಸಕರು ತಮ್ಮ ತಂದೆ ಚಿಕಿತ್ಸೆ ಪಡೆಯುತ್ತಿರುವ ಲೂಧಿಯಾನ ಡಿಎಂಸಿಗೆ ತಲುಪಿದ್ದಾರೆ. ಈ ಮಧ್ಯೆ ಉಗೋಕೆ ಅವರ ಆಪ್ತ ಸಹಾಯಕ ಗುರ್ತೇಜ್ ಸಿಂಗ್ ಅವರು ಮಾತನಾಡಿ, ಶಾಸಕರ ತಂದೆಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿದೆ ಎಂದು ಹೇಳಿಕೆ ನೀಡಿದ್ದರು.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ನಂತರ ಲಾಭ್ ಸಿಂಗ್ ಉಗೋಕೆ ಗಮನ ಸೆಳೆದರು.

Live Tv

Leave a Reply

Your email address will not be published.

Back to top button