– ಶೇ.12.50 ರಷ್ಟು ವೇತನ ಹೆಚ್ಚಿಸಿದ ಸರ್ಕಾರ
ಬೆಂಗಳೂರು: ಸಾರಿಗೆ ನೌಕರರಿಗೆ (Transport Workers) ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಶೇ.12.50 ರಷ್ಟು ವೇತನ ಪರಿಷ್ಕರಿಸಲಾಗಿದ್ದು, ಹೊಸ ವೇತನವು ಜು.1ರ ವೇತನದಲ್ಲೇ ಪಾವತಿಗೆ ಸರ್ಕಾರ ಆದೇಶ ಹೊರಡಿಸಿದೆ.
2025 ಮಾರ್ಚ್ 31ರ ಮೂಲ ವೇತನದ ಮೇಲೆ 12.5% ನಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಸಾರಿಗೆ ನೌಕರರು ಹಲವು ವರ್ಷಗಳಿಂದ ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕ್ – ಇಂದಿನಿಂದ 20% ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ
ಶೇ.25 ರಷ್ಟು ವೇತನ ಪರಿಷ್ಕರಣೆಗೆ ಸಾರಿಗೆ ಸಂಘಟನೆಗಳು ಒತ್ತಾಯಿಸಿದ್ದವು. ವೇತನ ಪರಿಷ್ಕರಣೆ ಮಾಡದಿದ್ದರೆ ಮುಷ್ಕರ ಮಾಡಲು ನಿರ್ಧರಿಸಿದ್ದವು. ಸದ್ಯ ಸಾರಿಗೆ ಇಲಾಖೆ ಶೇ.12.5 ರಷ್ಟು ವೇತನ ಪರಿಷ್ಕರಿಸಿದೆ. ಆದರೆ, ಇದಕ್ಕೆ ಸಾರಿಗೆ ನೌಕರರ ಸಂಘಟನೆಗಳು ಒಪ್ಪಿಗೆ ಸೂಚಿಸಿಲ್ಲ.
20 ರಂದು ಮುಷ್ಕರ ಮಾಡಲು ನಿರ್ಧಾರಿಸಿವೆ. ನಾಲ್ಕು ನಿಗಮದ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. 2024 ಜನವರಿಯಿಂದ 25% ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ಆದರೆ, ಸರ್ಕಾರ 2025 ಮಾರ್ಚ್‌ನಿಂದ 12.5% ವೇತನ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿದೆ.
ಸರ್ಕಾರದ ನಿರ್ಧಾರಕ್ಕೆ ಸದ್ಯ ಸಾರಿಗೆ ನೌಕರರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಮುಷ್ಕರ ನಡೆಸುವುದಾಗಿ ತಿಳಿಸಿವೆ. ಇದನ್ನೂ ಓದಿ: KPSC ಹಾಳಾಗೋಕೆ ಕಾಂಗ್ರೆಸ್ ಕಾರಣ, ಇವರ ಅವಧಿಯಲ್ಲಿ ಎಷ್ಟು ಬಾರಿ ಪೇಪರ್ ಲೀಕ್ ಆಗಿದೆ: ಹೆಚ್‌ಡಿಕೆ ಕಿಡಿ

