ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿನ್ನೆ ತಿಳಿಸಿದಂತೆ ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
Advertisement
ನಿನ್ನೆ ಬಸವರಾಜ ಬೊಮ್ಮಾಯಿ ಅವರು ಟ್ಟಿಟ್ಟರ್ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ಧರಿಸಿದೆ. ಈ ನಮ್ಮ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಅಂದಾಜು 2100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ. ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ 7 ರೂ. ಗಳಷ್ಟು ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ- ನಾಳೆ ಸಂಜೆಯಿಂದ ಜಾರಿಗೆ
Advertisement
Advertisement
ಇಂದು ಅಧಿಕೃತ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಪೆಟ್ರೋಲ್‍ಗೆ 13.30 ರೂ. ಮತ್ತು ಡೀಸೆಲ್ 19.47 ರೂ ಕಡಿತಗೊಳಿಸಿ ಹೊಸ ದರ ಪ್ರಕಟಿಸಿದೆ. ಈ ಮೂಲಕ ಪೆಟ್ರೋಲ್ ಹೊಸ ದರ ಲೀ. 100.63 ರೂ. ಮತ್ತು ಡೀಸೆಲ್ ಹೊಸ ದರ ಲೀ. 85.03 ರೂ.ಗೆ ಇಳಿಕೆ ಕಂಡು ಸಾರ್ವಜನಿಕರಿಗೆ ಸಂತಸ ತರಿಸಿದೆ. ಇದನ್ನೂ ಓದಿ: ಅವನೇ ಇಲ್ಲ, ದೂರು ಕೊಟ್ಟು ಏನು ಮಾಡೋದು: ಶಿವಣ್ಣ ಪ್ರಶ್ನೆ
Advertisement