ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಸಾವು ಇಡೀ ಚಿತ್ರರಂಗ, ಕುಟುಂಬ, ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಈ ಮಧ್ಯೆ ಅಭಿಮಾನಿಯೋರ್ವ ಸದಾಶಿವನಗರದಲ್ಲಿ ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಅವನೇ ಇಲ್ಲ ಅಂದಮೇಲೆ ದೂರು ಕೊಟ್ಟು ಏನು ಪ್ರಯೋಜನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈವಾಗ ಅವನೇ ಇಲ್ಲ. ಹೀಗಿದ್ದಾಗ ದೂರು ಕೊಟ್ಟು ಏನು ಪ್ರಯೋಜನ. ಮುದೊಂದು ದಿನ ಅವರಿಗೆ ಅರ್ಥವಾಗುತ್ತದೆ. ನಾವೇನು ಮಾಡೋದು ಬೇಕಾಗಿಲ್ಲ. ದೇವರಿದ್ದಾನೆ. ದಯವಿಟ್ಟು ಅದೆಲ್ಲಾ ಬೇಡ. ಈಗ ಅದೆಲ್ಲವನ್ನ ಮಾತನಾಡಿ ಪ್ರಯೋಜನವಿಲ್ಲ. ಅದೆಲ್ಲವನ್ನ ಬಿಟ್ಟು ಮುಂದೆ ಸಾಗೋಣ ಎಂದು ಶಿವಣ್ಣ ಹೇಳಿದರು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ‘ಬಸವಶ್ರೀ ಪ್ರಶಸ್ತಿ’ ಘೋಷಣೆ
Advertisement
Advertisement
ದೂರಿನಲ್ಲೇನಿದೆ..?
ಡಾಕ್ಟರ್ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುತ್ತಿದ್ದರೆ ಪುನೀತ್ ಅವರಿಗೆ ಹೀಗಾಗುತ್ತಿರಲಿಲ್ಲ ಎಂದು ಅಭಿಮಾನಿಯೊಬ್ಬರು ವೈದ್ಯರ ವಿರುದ್ಧ ಸದಾಶಿವನಗರದಲ್ಲಿ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಪುನೀತ್ ಸಾವಿಗೂ 46 ಸಂಖ್ಯೆಗೂ ಸಂಬಂಧವೇನು?