ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಗದಗ್ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದ ಭಾಷಣದಲ್ಲಿ ಮಹಾದಾಯಿ ವಿಚಾರವನ್ನು ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ಚನಾವಣಾ ಆಯೋಗಕ್ಕೆ ದೂರು ನೀಡಿದೆ.
ಚುನಾವಣೆಯ ನೀತಿ ಸಂಹಿತೆ ಜಾರಿಗೆ ಇರುವ ವೇಳೆಯಲ್ಲಿ ಪಕ್ಷದ ಪ್ರಣಾಳಿಕೆ ವಿಷಯ ಬಿಟ್ಟು ಬೇರೆ ಯಾವ ವಿಚಾರವೂ ಮಾಡನಾಡುವಂತಿಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾದಾಯಿ ಸಮಸ್ಯೆ ಕುರಿತು ಮಾತನಾಡಿ ಸುಳ್ಳು ಆರೋಪ ಮಾಡಿದ್ದಾರ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement
Advertisement
ಚುನಾವಣೆಯ ಸಮಯದಲ್ಲಿ ಒಬ್ಬ ಪ್ರಧಾನಿ ಈ ರೀತಿ ಮಾತಾನಾಡುವುದು ಸರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಾವಿರ ಸುಳ್ಳಿನ ಸರದಾರ, ಪ್ರಧಾನಿಗಳು ಇಡೀ ದೇಶಕ್ಕೆ ಪ್ರಧಾನಿಯೇ ಹೊರತು ಬಿಜೆಪಿಗಲ್ಲ. ಪ್ರಧಾನಿಗಳ ಇಂತಹ ಹೇಳಿಕೆಗಳನ್ನ ಆಯೋಗ ಕೂಡಲೇ ತಡೆ ನೀಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆಇ ರಾಧಾಕೃಷ್ಣ ಹೇಳಿದ್ದರೆ.
Advertisement
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಮಾಡಿದ್ದಾರೆ. ಗದಗ್ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗಿದೆ. ಬಿಜೆಪಿ ಗೆ ಮತ ನೀಡಿದಲ್ಲಿ ಮಹದಾಯಿ ವಿವಾದ ಬಗೆಹರಿಸುವುದಾಗಿ ಆಮಿಷ ಒಡಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
ಮೆ 1 ರಂದು ಸಿಎಂ ಸಿದ್ದರಾಮಯ್ಯ ಮಹದಾಯಿ ಸಮಸ್ಯೆಯನ್ನು ಬಹೆಹರಿಸಲು ಯಾಕೆ ನಮಗೆ ಸಹಾಯ ಮಾಡುವುದಿಲ್ಲ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಶನಿವಾರ ಗದಗ್ ನಲ್ಲಿ ನಡೆದ ಕಾರ್ಯಕ್ರಮದ ಭಾಷಣದಲ್ಲಿ, ಮಹದಾಯಿ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆ ಹರಿಸಲು ಬದ್ಧ ಎಂದು ಹೇಳಿದ್ದರು.