ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಇಂದು ದೆಹಲಿಗೆ(Delhi) ಪ್ರಯಾಣಿಸಿ ಹೈಕಮಾಂಡ್ ನಾಯಕರ ಜೊತೆ ಮೂರು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕರ್ನಾಟಕ ಚುನಾವಣೆಯಲ್ಲಿ(Karnataka Election) 150+ ಸ್ಥಾನವನ್ನು ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ(BJP) ಈಗ ಮೂರು ವಿಷಯಗಳು ತಲೆನೋವನ್ನು ತಂದಿಟ್ಟಿದೆ. ಚುನಾವಣೆ ತಿಂಗಳು ಹತ್ತಿರ ಬರುತ್ತಿದ್ದಂತೆ ಯಾವುದೇ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕಾರಣಕ್ಕೆ ಈ ಭೇಟಿ ಈಗ ಮಹತ್ವ ಪಡೆದಿದೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?
Advertisement
3 ವಿಷಯಗಳು ಯಾವುದು?
ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಮರಳಿ ಸಚಿವ ಸ್ಥಾನ ಕೊಡಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿಲುವು ಕೇಳಲಿದ್ದಾರೆ. ಇದರ ಜೊತೆ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಸಿಎಂ ವಿವರ ನೀಡಲಿದ್ದಾರೆ.
Advertisement
ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕ ಶಿವಮೊಗ್ಗದಲ್ಲಿ ಪ್ರಭಾವಿ ಹೊಂದಿದ್ದಾರೆ. ರಮೇಶ್ ಜಾರಕಿಹೊಳಿ ಬೆಳಗಾವಿ ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಈಶ್ವರಪ್ಪ ಕೆಲ ದಿನಗಳಿಂದ ಮಂತ್ರಿ ಸ್ಥಾನ ನೀಡದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್ ನಡೆ ಏನು ಎನ್ನುವ ಕೂತೂಹಲ ಮೂಡಿದೆ.