ಬೆಂಗಳೂರು: ನಿರಂತರ ಆರೋಪ, ವಾಗ್ದಾಳಿ ನಡೆಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹೌದು. ಇಂದಿನ ಸಂಪುಟ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ಸಿಬಿಐ ತನಿಖೆ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಡಿಗ್ರಿಯಲ್ಲಿ ಎರೆಡೆರಡು ಬಾರಿ ಫೇಲ್ – ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ರ‍್ಯಾಂಕ್!
ಇತ್ತ ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಬಿಐ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿಗೆ ರಾಜ್ಯಪಾಲರು ಅಭಿಪ್ರಾಯ ಕೇಳಿದ್ದಾರೆ. ಹೀಗಾಗಿ ನಾಗೇಂದ್ರ ನೆಪದಲ್ಲಿ ಹೆಚ್‌ಡಿಕೆ ವಿರುದ್ಧವೂ ತನಿಖೆಗೆ ಶಿಫಾರಸು ಮಾಡುವ ಪ್ಲ್ಯಾನ್‌ನಲ್ಲಿದೆ.

ಹೆಚ್‌ಡಿಕೆ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡೋದಕ್ಕಾಗಿ ರಾಜ್ಯಪಾಲರ ಮೇಲೆ ಒತ್ತಡ ತರೋದಕ್ಕೂ ರಾಜ್ಯ ಸರ್ಕಾರದ ಕಾರ್ಯತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು
ನಾಗೇಂದ್ರ ಫೈಲ್ ಜೊತೆಗೆ ಹೆಚ್‌ಡಿಕೆ, ಜನಾರ್ದನ ರೆಡ್ಡಿ, ರೇಣುಕಾಚಾರ್ಯ ಅವರ ಫೈಲ್‌ಗಳಿಗೂ ಅಭಿಪ್ರಾಯ ಕೊಡುತ್ತಾ ಸರ್ಕಾರ ಎಂಬುದು ಕುತೂಹಲ ಮೂಡಿಸಿದೆ.
ಯಾರ‍್ಯಾರ ಮೇಲೆ ಯಾವ ಕೇಸ್?
* ಕುಮಾರಸ್ವಾಮಿ – ಸಾಯಿ ಮಿನರಲ್ಸ್ ಪ್ರಕರಣ.
* ನಾಗೇಂದ್ರ – ವಾಲ್ಮೀಕಿ ನಿಗಮದ ಹಗರಣ ಪ್ರಕರಣ.
* ಜನಾರ್ದನ ರೆಡ್ಡಿ – ಅಕ್ರಮ ಗಣಿಗಾರಿಕೆ ಪ್ರಕರಣ.
* ರೇಣುಕಾಚಾರ್ಯ – ಅಕ್ರಮ ಆಸ್ತಿಗಳಿಕೆ ಪ್ರಕರಣ.
