ಕನ್ನಡದ ‘ಕಾಂತಾರ’ (Kantara) ಸಂಗೀತ ಡೈರೆಕ್ಟರ್ ಅಜನೀಶ್ ಲೋಕನಾಥ್ (Ajaneesh Lokanath) ಅವರಿಗೆ ಬೇಡಿಕೆ ಜಾಸ್ತಿಯಾಗಿದೆ. ಪರಭಾಷೆಗಳಿಂದ ಅಜನೀಶ್ಗೆ ಬುಲಾವ್ ಬರುತ್ತಿದೆ. ತೆಲುಗು ಆಯ್ತು ಮರಾಠಿ (Marati) ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಅಜನೀಶ್ ಲೋಕನಾಥ್ ಪರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲೂ ತಮ್ಮ ಸಂಗೀತ ಪ್ರತಿಭೆಯನ್ನ ಅದ್ಭುತ ಹಾಡುಗಳನ್ನ ನೀಡುವ ಮೂಲಕ ಅಲ್ಲಿಯ ಜನರ ಮನಸ್ಸು ಕದ್ದಿಯುತ್ತಿದ್ದಾರೆ. ‘ಕಾಂತಾರ’ (Kantara) ಮೂಲಕ ಎಲ್ಲೆಡೆ ಚಿರಪರಿಚಿತರಾಗಿರೋ ಅಜನೀಶ್ ಇದೀಗ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್ ಪ್ಲ್ಯಾನ್
ಇತ್ತೀಚಿನ ಅಜನೀಶ್ ಲೋಕನಾಥ್ ‘ವಿರೂಪಾಕ್ಷ’ (Veerupaksha Film) ಸಿನಿಮಾದಲ್ಲೂ ಒಂದು ಅದ್ಭತ ಹಾಡನ್ನ ಮಾಡಿಕೊಟ್ಟಿದ್ದಾರೆ. ಸಾಯಿ ಧರ್ಮ ತೇಜ್, ಗಾಳಿಪಟ 2 ನಾಯಕಿ ಸಂಯುಕ್ತಾ ಈ ಹಾಡಿಗೆ ಅಭಿನಯಿಸಿದ್ದಾರೆ. ಈಗ ಈ ಹಾಡು ರಿಲೀಸ್ ಕೂಡ ಆಗಿದೆ. ಇದರ ಹೊರತಾಗಿ ಅಜನೀಶ್ ಮೊನ್ನೆ ರಿಲೀಸ್ ಆದ ‘ಸರಿ’ (Sari Film) ಸಿನಿಮಾ ಮೂಲಕ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಕೂಡ ಸಂಗೀತ ಮಾಡಿದ್ದಾರೆ. ಕನ್ನಡದ ‘ದಿಯಾʼ ಹೀರೋ ಪೃಥ್ವಿ ಅಂಬರ್ ನಟಿಸಿರುವ ಸಿನಿಮಾ ಇದಾಗಿದೆ. ‘ದಿಯಾ’ ಚಿತ್ರವನ್ನೇ ಮರಾಠಿ ‘ಸರಿ’ ಟೈಟಲ್ನಲ್ಲಿ ಸಿನಿಮಾ ಮಾಡಲಾಗಿದೆ.
ಅಜನೀಶ್ ಲೋಕನಾಥ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಆದರೆ ಮರಾಠಿ ಇಂಡಸ್ಟ್ರೀಗೆ ಕಾಲಿಟ್ಟಿರಲಿಲ್ಲ. ಈಗ ಅದು ಕೂಡ ಆಗಿದೆ. ಮೇ-5 ರಂದು ಮರಾಠಿ ಭಾಷೆಯ ಸರಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿವೆ ಅನ್ನುವ ಮಾಹಿತಿ ಕೂಡ ಇದೆ. ಮರಾಠಿಗರು ಕೂಡ ಅಜನೀಶ್ ಸಂಗೀತಕ್ಕೆ ಫಿದಾ ಆಗಿದ್ದಾರೆ. ಇನ್ನೂ ಕನ್ನಡದ ಕಾಂತಾರ 2ಗೂ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.