Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ – 80 ಕೋಟಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ – 80 ಕೋಟಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ

Districts

ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ – 80 ಕೋಟಿ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ

Public TV
Last updated: April 15, 2026 7:42 am
Public TV
Share
3 Min Read
PM Modi In Mangaluru
SHARE

-ಮೋದಿ ಆಗಮನದ ಹಿನ್ನೆಲೆ 2,500ಕ್ಕೂ ಅಧಿಕ ಪೊಲೀಸರಿಂದ ಬಿಗಿ ಬಂದೋಬಸ್ತ್

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರಿಂದು (ಏ.15) ಆದಿಚುಂಚನಗಿರಿಗೆ ಭೇಟಿ ನೀಡಲಿದ್ದು, 80 ಕೋಟಿ ರೂ.ಗೂ ಅಧಿಕ ವೆಚ್ಚದ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ.

ದೆಹಲಿಯಿಂದ (Delhi) ಪ್ರಧಾನಿ ಮೋದಿಯವರು (PM Modi) 10:05ಕ್ಕೆ ಹೆಚ್‌ಎಎಲ್‌ಗೆ (HAL) ಆಗಮಿಸಲಿದ್ದು, ಬಳಿಕ ಅಲ್ಲಿಂದ 10:50ಕ್ಕೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ (Adichunchanagiri) ತಪೋವನದ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಈ ವೇಳೆ ಮೋದಿಗೆ ಶ್ರೀ ಮಠದವರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಇದನ್ನೂ ಓದಿ: ನಾಳೆ ಮತ್ತೆ ಮಂಡ್ಯಕ್ಕೆ ಮೋದಿ ಭೇಟಿ – ಪ್ರಧಾನಿಗಳ ಸ್ವಾಗತಕ್ಕೆ ಮೈಸೂರು ಪೇಟ; ಏನಿದರ ವಿಶೇಷ?

ಮೊದಲು ಮೋದಿ ಗೋರಕ್ಷಕನಾಥ ತಪಸ್ಸು ಮಾಡಿ, ಜ್ವಾಲಾಪೀಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ತೆರಳಲಿದ್ದಾರೆ. ಅಲ್ಲಿ ದರ್ಶನ ಪಡೆದು ಮಂಗಳಾರತಿ ಮಾಡಲಿದ್ದಾರೆ. ಬಳಿಕ ಗುರು ಭೈರವೈಕ್ಯ ಮಂದಿರದ ಉದ್ಘಾಟನೆ ಮಾಡಲಿದ್ದಾರೆ. ಆನಂತರ ಮಂದಿರ ವೀಕ್ಷಿಸಿ ಬಾಲಗಂಗಾಧರನಾಥ ಶ್ರೀಗಳಿಗೆ ನಮನ ಸಲ್ಲಿಸಲಿದ್ದಾರೆ. ನಂತರ ಕ್ರೀಡಾಂಗಣದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಸೌಂದರ್ಯ ಲಹರೀ ಮತ್ತು ಶಿವಮಹಿಮ್ನಹಃ ಸ್ತೋತ್ರಮ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಶ್ರೀ ಮಠದಿಂದ ಮೋದಿಗೆ ಉಡುಗೊರೆ ನೀಡಿ, ಸನ್ಮಾನಿಸಿ ಗೌರವ ಸಲ್ಲಿಸಲಿದ್ದಾರೆ.

ಗೌರವ ಸನ್ಮಾನದ ಬಳಿಕ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಹೆಚ್‌ಎಎಲ್‌ಗೆ ಮರಳಿ, ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಮೋದಿ ಆಗಮನದ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್:
ಚುಂಚನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಭದ್ರತೆಗೆ 6 ಜನ ಎಸ್ಪಿ, 8 ಎಎಸ್ಪಿ, 18 ಡಿವೈಎಸ್ಪಿ, 53 ಇಸ್ಪೆಕ್ಟರ್, 175 ಸಬ್ ಇನ್ಸಪೆಕ್ಟರ್, 1,00 ಪೊಲೀಸ್ ಕಾನ್‌ಸ್ಟೆಬಲ್, 8 ಕೆಎಸ್‌ಆರ್‌ಪಿ, 16 ಡಿಆರ್ ತುಕಡಿ ನಿಯೋಜಿಸಲಾಗಿದೆ. ಒಟ್ಟು ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಕಾರ್ಯಕ್ರಮ ಆರಂಭವಾಗುವ ಒಂದೂವರೆ ತಾಸಿನ ಮುಂಚೆ ಸಾರ್ವಜನಿಕರಿಗೆ ಬರಲು ಸೂಚನೆ ನೀಡಲಾಗಿದೆ. ಇನ್ನೂ ಚುಂಚನಗಿರಿ ಸುತ್ತಮುತ್ತ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರನ್ವಯ ಬೆಳ್ಳೂರು ಪಟ್ಟಣ ಪಂಚಾಯಿತಿಯ 8 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಗೆ ನಿರ್ಬಂಧ ಹೇರಲಾಗಿದೆ ಎಂದು ಮಂಡ್ಯ ಡಿಸಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: 55 ವರ್ಷಗಳ ಓಡಾಟ ಬಂದ್‌ – ಇನ್ನೂ ಪ್ರವಾಸೋದ್ಯಮಕ್ಕೆ ಲಾಂಚ್‌ ಬಳಕೆಯಾಗಿಲ್ಲ ಯಾಕೆ?

ಆದಿಚುಂಚನಗಿರಿ ಇತಿಹಾಸ:
ಆದಿಚುಂಚನಗಿರಿ ಮಠ 1800 ವರ್ಷಗಳ ಇತಿಹಾಸ ಹೊಂದಿದ್ದು, ತ್ರಿವಳಿ ದಾಸೋಹ ಮೂಲಕ ಪ್ರಸಿದ್ಧಿ ಪಡೆದಿದೆ. ಚುಂಚನಗಿರಿ ಮಠದ ಅಪಾರ ಕೀರ್ತಿಗೆ ಕಾರಣರಾಗಿರುವವರೇ ಬಾಲಗಂಗಾಧರನಾಥ ಶ್ರೀಗಳು. ಇಂದು ಅದೇ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಸ್ಥಳದಲ್ಲಿ ಗುರು ಭೈರವೈಕ್ಯ ಮಂದಿರ ಸುಮಾರು 80 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದೆ.

3 ಆಲಯಗಳನ್ನು ಹೊಂದಿರುವ ಭೈರವೈಕ್ಯ ಭವ್ಯ ಮಂದಿರ ಕಾರಣದೇಹ, ಸೂಕ್ಷ್ಮದೇಹ ಹಾಗೂ ಸ್ತೂಲದೇಹದ ಪರಿಕಲ್ಪನೆಯಲ್ಲಿ ನಿರ್ಮಾಣವಾಗಿದೆ. ಅನ್ನ, ಪ್ರಾಣ, ಮನೋಮಯ, ವಿಜ್ಞಾನ ಮತ್ತು ಆನಂದಮಯದ ಐದು ಕೋಶಗಳನ್ನು ಈ ಮಂದಿರ ಹೊಂದಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಹೊಯ್ಸಳ, ಚಾಲುಕ್ಯ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಯ ಸಮಾಗಮದಲ್ಲಿ ಮೂಡಿಬಂದಿದೆ. ಇಲ್ಲಿ ಒಡಿಸ್ಸಾದ ಸೂರ್ಯ ದೇಗುಲದ ಕಲೆಯ ನಿರೂಪಣೆ ಮಾಡಲಾಗಿದ್ದು, ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡದ ಕೆತ್ತನೆಗಳಿಂದ ಮಂದಿರದ ಮೆರಗು ಹೆಚ್ಚಿಸಲಾಗಿದೆ.

ಮಂದಿರದ ನಿರ್ಮಾಣಕ್ಕೆ ಕ್ಲೈರಾ ಎಂಬ ಕಲ್ಲು ಹೆಚ್ಚು ಬಳಕೆ ಮಾಡಲಾಗಿದ್ದು, ಇಳಕಲ್ ಹಾಗೂ ಸಂತೆಕಲ್ ಎಂಬ ಮಾದರಿ ಕಲ್ಲುಗಳು ಕೆತ್ತನೆಗೆ ಬಳಸಿದ್ದಾರೆ. ಸತತ ಆರೇಳು ವರ್ಷಗಳ ಪರಿಶ್ರಮದಿಂದ ಭವ್ಯ ಮಂದಿರ ಮೂಡಿಬಂದಿದ್ದು, ಬೆಳಗಾವಿಸೌಧ, ಬೆಂಗಳೂರಿನ ವಿಕಾಸಸೌಧ ಸೇರಿದಂತೆ ಮೊದಲಾದ ಭವ್ಯ ಕಟ್ಟಡ ಕಟ್ಟ ನಿರ್ಮಿಸಿದ ಕೀರ್ತಿ ಹೊಂದಿರುವ ಶಂಕರ ಸ್ತಪತಿಯವರೇ ಈ ಮಂದಿರವನ್ನು ನಿರ್ಮಿಸಿದ್ದಾರೆ.ಇದನ್ನೂ ಓದಿ: ಏ.15ಕ್ಕೆ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆ ಉದ್ಘಾಟಿಸಲಿದ್ದಾರೆ ಮೋದಿ

TAGGED:AdichunchanagirimandyaPM Modiಆದಿಚುಂಚನಗಿರಿಗುರು ಭೈರವೈಕ್ಯ ಮಂದಿರಪ್ರಧಾನಿ ಮೋದಿಮಂಡ್ಯ
Share This Article
FacebookWhatsappWhatsappTelegram

Cinema news

Trisha Krishnan
ಬರ್ತ್‌ಡೇ ದಿನ ಕ್ಲಾಸಿ ಕುರ್ತಾದಲ್ಲಿ ತ್ರಿಷಾ ಮಿಂಚು – ನಟಿ ಧರಿಸಿದ್ದ ಐವರಿ ಸೆಟ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!
CinemaFashionLatestNationalSouth cinemaTop Stories
Sara Govindu
ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅಣ್ಣಾವ್ರ ವಿಚಾರದಲ್ಲಿ ರಾಜಿ ಆಗಿಲ್ಲ – ನಟ ಚೇತನ್ ವಿರುದ್ಧ ಸಾ.ರಾ ಗೋವಿಂದು ಕಿಡಿ
Bengaluru CityCinemaDistrictsKarnatakaLatestSandalwoodTop Stories
TVK vijay and shivarajkumar
ಟಿವಿಕೆ ಅಂದ್ರೆ Try Vijay as King ಅಂದಿದ್ದೆ, ಇಂದು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ – ನಟ ವಿಜಯ್‌ಗೆ ಶಿವಣ್ಣ ವಿಶ್
CinemaLatestNationalTop Stories
Vijay Thalapathy 2
ರಾಜಕೀಯಕ್ಕೆ ವಿಜಯ್‌ ಬ್ಲಾಕ್‌ಬಸ್ಟರ್‌ ಎಂಟ್ರಿ – ರಶ್ಮಿಕಾ, ರಜನಿ, ಕಮಲ್‌ ಬೆಸ್ಟ್‌ ವಿಶ್‌
CinemaLatestNationalSandalwoodTop Stories

You Might Also Like

Weather
Bengaluru City

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆ – 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Public TV
ByPublic TV
2 minutes ago
Wodeyar Express Train
Districts

ರಾಮನಗರದ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ‘ಒಡೆಯರ್ ಎಕ್ಸ್‌ಪ್ರೆಸ್’ ನಿಲುಗಡೆಗೆ ಸಿಕ್ತು ಗ್ರೀನ್ ಸಿಗ್ನಲ್

Public TV
ByPublic TV
17 minutes ago
Asansol Durga temple
Latest

ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು – ಹಲವು ವರ್ಷಗಳಿಂದ ಮುಚ್ಚಿದ್ದ ದುರ್ಗಾ ದೇವಸ್ಥಾನ ಬಾಗಿಲು ಓಪನ್‌

Public TV
ByPublic TV
23 minutes ago
Boeing KC 135 Stratotanker
Latest

ಎಮರ್ಜೆನ್ಸಿ ಕೋಡ್‌ ಕಳಿಸಿ ನಾಪತ್ತೆಯಾದ ಅಮೆರಿಕದ ʻಫ್ಲೆಯಿಂಗ್‌ ಗ್ಯಾಸ್‌ ಸ್ಟೇಷನ್‌ʼ

Public TV
ByPublic TV
29 minutes ago
Shashi Tharoor 1
Latest

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಗೆಲುವು – ಮೋದಿ, ಅಮಿತ್ ಶಾರನ್ನ ಹೊಗಳಿದ ಶಶಿ ತರೂರ್

Public TV
ByPublic TV
1 hour ago
Siddaramaiah 15
Bengaluru City

ತಮಿಳುನಾಡು ಫಲಿತಾಂಶ ಆಶ್ಚರ್ಯಕರವಾಗಿದೆ: ಸಿದ್ದರಾಮಯ್ಯ

Public TV
ByPublic TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?