ದೇಶದಲ್ಲಿ ಎರಡನೇ ಲಾಕ್‍ಡೌನ್ ಆರಂಭವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿರಬೇಕು. ಹೀಗಾಗಿ ಎಲ್ಲರೂ ಮನೆಯಲ್ಲಿ ಇದ್ದಾರೆ. ಪ್ರತಿದಿನ ಮಾಡುವ ತಿಂಡಿಯನ್ನೇ ಮಾಡುತ್ತಿದ್ದರೆ ಬೇಸರವಾಗುತ್ತದೆ. ಹೀಗಾಗಿ ಕೆಂಪು ಈರುಳ್ಳಿ ಗೊಜ್ಜು ಮಾಡುವ ವಿಧಾನ ಇಲ್ಲಿದೆ?
ಬೇಕಾಗುವ ಸಾಮಾಗ್ರಿಗಳು
1. ಈರುಳ್ಳಿ- 7 (ಸಂಬಾರ್ ಈರುಳ್ಳಿ-ಸಣ್ಣದು)
2. ಬ್ಯಾಡಗಿ ಮೆಣಸಿನಕಾಯಿ -7 ರಿಂದ 8
3. ಮೆಂತೆ – ಅರ್ಧ ಟೀ ಸ್ಪೂನ್
4. ಜೀರಿಗೆ -1 ಟೀ ಸ್ಪೂನ್
5. ದನಿಯಾ -ಒಂದು ಟೀ ಸ್ಪೂನ್
6. ಉದ್ದಿನ ಬೇಳೆ -1 ಟೀ ಸ್ಪೂನ್
7. ಹುಣಸೆ ಹಣ್ಣು – ಸ್ವಲ್ಪ
9. ಸಾಸಿವೆ- ಅರ್ಧ ಟೀ ಸ್ಪೂನ್
10. ಎಣ್ಣೆ- ಒಗ್ಗರಣೆಗೆ
11. ಕಡಲೆ ಬೇಳೆ- ಅರ್ಧ ಟೀ ಸ್ಪೂನ್
12. ಕರಿಬೇವು – ಸ್ವಲ್ಪ
13. ಬೆಳ್ಳುಳ್ಳಿ – 8 ರಿಂದ 10 ಎಳಸು
14. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಗ್ಯಾಸ್ ಆನ್ ಮಾಡ್ಕೊಂಡು ಮೊದಲಿಗೆ ಒಂದು ಪ್ಯಾನ್ ಇಟ್ಟುಕೊಳ್ಳಿ. ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾಗುತ್ತಿದ್ದಂತೆ ಮೆಂತೆ, ದನಿಯಾ, ಜೀರಿಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಜೀರಿಗೆ, ಮೆಂತೆ, ದನಿಯಾ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಹುಣಸೆ ಹಣ್ಣು ಹಾಕಿ ಫ್ರೈ ಮಾಡಿ.
* ಫ್ರೈ ಮಾಡಿಕೊಂಡ ಎಲ್ಲ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವ ಮುನ್ನ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಮಿಶ್ರಣ ನುಣ್ಣಗೆ ಆಗ್ತಿದ್ದಂತೆ ಆರು ಈರುಳ್ಳಿಯನ್ನು ದೊಡ್ಡದಾಗಿ ಕಟ್ ಮಾಡಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ.
* ಈಗ ಮತ್ತೊಂದು ಪ್ಯಾನ್ ಇಟ್ಟುಕೊಂಡು ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ. ಎಲ್ಲವೂ ಫ್ರೈ ಮಾಡಿದ ಮೇಲೆ ಕತ್ತರಿಸಿಕೊಂಡಿರುವ ಒಂದು ಈರುಳ್ಳಿಯನ್ನು ಹಾಕಿ, ಹಸಿ ವಾಸನೆ ಹೋಗುವರೆಗೆ ಫ್ರೈ ಮಾಡಿ.
* ಕೊನೆಗೆ ಒಗ್ಗರಣೆಗೆ ಮಿಕ್ಸಿಯಲ್ಲಿ ಸಿದ್ಧಮಾಡಿಕೊಂಡಿದ್ದ ಮಿಶ್ರಣವನ್ನು ಮಿಕ್ಸ್ ಮಾಡಿ ಚೆನ್ನಾಗಿ ಘಮ ಘಮ ಪರಿಮಳ ಬರುವರೆಗೆ ಫ್ರೈ ಮಾಡಿದ್ರೆ ಕೆಂಪು ಈರುಳ್ಳಿ ಗೊಜ್ಜು ಸಿದ್ಧ.