ಬಿಗ್ ಬಾಸ್ ಮನೆಗೆ ‘ಅಗ್ನಿಸಾಕ್ಷಿ’ ನಟಿ ಎಂಟ್ರಿ?

Public TV
1 Min Read
shobha shetty 2

ನ್ನಡದ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ (Shobha Shetty) ಅವರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ. ಕನ್ನಡತಿ ಶೋಭಾ ಅವರು ತೆಲುಗಿನ ಬಿಗ್ ಬಾಸ್‌ಗೆ (Bigg Boss) ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡ ಸೀರಿಯಲ್‌ನಲ್ಲಿ ಬದುಕು ಆರಂಭಿಸಿದ ನಟಿ, ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

shobha shetty

ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ನಾಯಕಿ ಸನ್ನಿಧಿ ಅಲಿಯಾಸ್‌ ವೈಷ್ಣವಿ ಗೌಡ (Vaishnavi Gowda) ಅವರ ತಂಗಿ ತನು ಪಾತ್ರದಲ್ಲಿ ಶೋಭಾ ಶೆಟ್ಟಿ ಗಮನ ಸೆಳೆದರು. ಕಾರಣಾಂತಗಳಿಂದ ಆ ಸೀರಿಯಲ್ ಅರ್ಧಕ್ಕೆ ಹೊರಬಂದಿದ್ದರು. ಬಳಿಕ ತೆಲುಗಿನಿಂದ ಉತ್ತಮ ಅವಕಾಶ ಸಿಕ್ಕ ಕಾರಣ, ಅಲ್ಲಿಯೇ ಬ್ಯುಸಿಯಾದರು. ಇದನ್ನೂಓದಿ:ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ‘ಜಿಂಕೆ ಮರಿ’ ನಂದಿತಾ ಶ್ವೇತಾ

shobha shetty 1

ಕನ್ನಡದ ಬಿಗ್ ಬಾಸ್ ಶುರುವಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ನಟ ನಾಗಾರ್ಜುನ (Nagarjuna) ಅವರ ನಿರೂಪಣೆಯ ತೆಲುಗಿನ ಬಿಗ್ ಬಾಸ್‌ಗೆ (Bigg Boss telagu) ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ  ಕನ್ನಡದ ನಟಿ ಶೋಭಾ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

shobha shetty

ಸೆಪ್ಟೆಂಬರ್ 3ರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದ್ದು, ಶೋಭಾ ಶೆಟ್ಟಿ (Shobha Shetty)  ಜೊತೆ ಹಲವರ ಹೆಸರು ಕೇಳಿ ಬರುತ್ತಿದೆ. ಈ ಬಾರಿ ಸಿಂಗರ್ಸ್, ಟಿಕ್ ಟಾಕ್ ಸ್ಟಾರ್ಸ್, ಹಿರಿತೆರೆ-ಕಿರುತೆರೆ ನಟ ನಟಿಯರು ಕಾಣಿಸಿಕೊಳ್ಳಲಿದ್ದಾರಂತೆ. ಎಲ್ಲದ್ದಕ್ಕೂ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

ತೆಲುಗಿನಲ್ಲಿ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳನ್ನು ಮಾಡುತ್ತಿರುವ ಶೋಭಾ ಶೆಟ್ಟಿ ವರ್ಷಗಳ ಹಿಂದೆ ವಾಹಿನಿವೊಂದರಲ್ಲಿ ಪ್ರಸಾರ ಆಗುತ್ತಿರುವ ‘ರುಕ್ಕು'(Rukku)  ಧಾರಾವಾಹಿಯಲ್ಲಿ ನಟಿಸಿ, ಅದನ್ನೂ ಅರ್ಧಕ್ಕೆ ಬಿಟ್ಟಿದ್ದರು. ಆ ನಂತರ ಮತ್ತೆ ಅವರು ತೆಲುಗಿನಲ್ಲಿಯೇ ಬ್ಯುಸಿ ಆದರು.

Share This Article