‘ಸಪ್ತಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾದಲ್ಲಿ ‘ಲವ್ ಯೂ ಮನು’ ಎನ್ನುತ್ತಾ ಭಯ ಹುಟ್ಟಿಸಿದ್ದ ರಮೇಶ್ ಇಂದಿರಾ (Ramesh Indira) ಇದೀಗ ತಮಿಳಿನತ್ತ ಮುಖ ಮಾಡಿದ್ದಾರೆ. ಸ್ಟಾರ್ ನಟ ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ ಕ್ವೀನ್ ಬ್ಯಾಕ್ ಟು ರಾಕ್- ಫ್ಯಾನ್ಸ್‌ಗೆ ಗುಡ್ ನ್ಯೂಸ್
ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದ ರಮೇಶ್ ಇಂದಿರಾ ಹಿರಿತೆರೆಯಲ್ಲಿ ಖಳನಟನಾಗಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಡಾಲಿ ನಟನೆಯ ‘ಕೋಟಿ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಈಗ ಕಾಲಿವುಡ್‌ನಲ್ಲಿ ಅವರಿಗೆ ಬಂಪರ್ ಅವಕಾಶ ಸಿಕ್ಕಿದೆ. ಸಿಕ್ಕಿರೋ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಂಡಿದ್ದಾರೆ. ಚಿಯಾನ್ ವಿಕ್ರಮ್ ನಟನೆಯ ‘ವೀರ ಧೀರ ಶೂರನ್’ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಈಗಾಗಲೇ ರಿಲೀಸ್ ಆಗಿರೋ ಚಿತ್ರದ ಟ್ರೈಲರ್‌ನಲ್ಲಿ ರಮೇಶ್ ಇಂದಿರಾ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರ ಹೇಗಿದೆ ಎಂಬುದಕ್ಕೆ ಮಾ.27ರಂದು ಉತ್ತರ ಸಿಗಲಿದೆ. ಚಿಯಾನ್ ವಿಕ್ರಮ್ ಜೊತೆ ರಮೇಶ್ ತೆರೆಹಂಚಿಕೊಂಡಿದ್ದಾರೆ ಎಂದರೆ ಇಲ್ಲಿನೋ ಹೊಸತನವಿದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹಾಗಾಗಿ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
ವಿಕ್ರಮ್ ನಟನೆಯ ‘ವೀರ ಧೀರ ಶೂರನ್’ ಚಿತ್ರವು ಮಾ.27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ವಿಕ್ರಮ್‌ಗೆ ನಾಯಕಿಯಾಗಿ ದುಶ್ರಾ ವಿಜಯನ್ ನಟಿಸಿದ್ದಾರೆ.