ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ನಟನೆಯ ‘ಎಮರ್ಜೆನ್ಸಿ’ ಚಿತ್ರದ (Emergency) ಟ್ರೈಲರ್ ರಿಲೀಸ್ ಮಾಡಲಾಗಿದೆ. ಮಾಜಿ ಪಿಎಂ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಜೀವ ತುಂಬಿದ್ದಾರೆ. ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಮತ್ತೆ ಮನೆ ರಣರಂಗ- ಚೈತ್ರಾ ಸುಳ್ಳಿ ಎಂದು ಗುಡುಗಿದ ರಜತ್
ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಕೇಂದ್ರವಾಗಿಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರದ 2ನೇ ಟ್ರೈಲರ್ ಇದಾಗಿದ್ದು, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ.
View this post on Instagram
1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದೆ. ರಾಜಕೀಯ ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಇಂದಿರಾ ಗಾಂಧಿ ಅವರು ಎದುರಿಸಿದ ರೀತಿಯನ್ನು ಟ್ರೈಲರ್ ಮೂಲಕ ಝಲಕ್ ತೋರಿಸಲಾಗಿದೆ.
ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ.
View this post on Instagram
ಕಂಗನಾ ಜೊತೆ ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಹಿಮಾ ಚೌದರಿ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮುಂತಾದವರು ನಟಿಸಿದ್ದಾರೆ. ಜನವರಿ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ಲ್ಯಾನ್ ಪ್ರಕಾರ ಆಗಿದ್ದರೆ ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗೋದು ತಡವಾಗಿತ್ತು. ಈಗ ಕಂಗನಾ ಸಿನಿಮಾ ಅಬ್ಬರಿಸಲು ದಿನಗಣನೆ ಶುರುವಾಗಿದೆ. ನಟನೆಯ ಜೊತೆ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟಿಗೆ ಗೆಲುವು ಸಿಗುತ್ತಾ? ಕಾಯಬೇಕಿದೆ.