ಟಾಲಿವುಡ್ ಕ್ವೀನ್ ಕಾಜಲ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ಅವರು ತಾಯ್ತನದ ಸಂತೋಷವನ್ನು ಅನುಭವಿಸುತ್ತಿದ್ದು, ಗರ್ಭಿಣಿಯರು ಹೇಗೆ ವರ್ಕೌಟ್ ಮಾಡಬೇಕು ಎಂದು ಸ್ವತಃ ಅವರೇ ಮಾಡಿ ತೋರಿಸಿದ್ದರು. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಈಗ ಈ ನಟಿ ಪತಿ ಗೌತಮ್ ಕಿಚ್ಲು ಅವರಿಗೆ ಮುದ್ದಾಗಿ ಥ್ಯಾಂಕ್ಸ್ ಹೇಳುವ ಮೂಲಕ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ.
- Advertisement 2
ಕಾಜಲ್ ತನ್ನ ಪತಿ ಗೌತಮ್ ಕಿಚ್ಲು ಅವರೊಂದಿಗಿನ ರೋಮ್ಯಾಂಟಿಕ್ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಪತಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು, ಪ್ರೀತಿಯ ಪತಿ, ಗರ್ಭಿಣಿಯಾದ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ಪತಿ ತಂದೆಯಂತೆ ಇರಬೇಕು ಎಂದು ಬಯಸುತ್ತಾರೆ. ಅದರಂತೆ ನೀವು ಇದ್ದೀರಾ ಅದಕ್ಕೆ ಧನ್ಯವಾದ. ಅನಾರೋಗ್ಯ, ವಾರಗಟ್ಟಲೆ ನನ್ನೊಂದಿಗೆ ಮಂಚದ ಮೇಲೆ ಕ್ಯಾಂಪಿಂಗ್ ಮಾಡಿದ್ದಕ್ಕಾಗಿ ಧನ್ಯವಾದ. ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ 20 ಅಡಿ ಯಶ್ ಭಾವಚಿತ್ರ
- Advertisement 3
View this post on Instagram
- Advertisement 4
ನನಗೆ ಕೆಟ್ಟ ಭಾವನೆ ಬರದಂತೆ ನೋಡಿಕೊಳ್ಳುವುದು, ಯಾವಾಗಲೂ ನಾನು ಚೆನ್ನಾಗಿ ತಿನ್ನುತ್ತಿದ್ದೇನೆ ಎಂದು ಖಚಿತಪಡಿಸಿಕೊಳ್ಳುವುದು. ನನ್ನ ಆರೈಕೆಗಾಗಿ ಎಲ್ಲ ರೀತಿಯ ಕೆಲಸವನ್ನು ಮಾಡುವಿರಿ. ಕೊನೆಯದಾಗಿ ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದ. ನಮ್ಮ ಮಗು ಬರುವುದಕ್ಕೂ ಮುನ್ನ ನೀವು ಎಷ್ಟು ಅದ್ಭುತವಾಗಿದ್ದೀರಿ ಎಂದು ನೀವೇ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಅದ್ಭುತ ತಂದೆಯಾಗುತ್ತೀರಿ ಎಂದು ಬರೆದು ಪತಿ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಈ ಫೋಟೋ ಮತ್ತು ಬರಹವನ್ನು ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಫುಲ್ ಖುಷ್ ಆಗಿದ್ದಾರೆ. ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ