ಗುವಾಹಟಿ: 2 ವರ್ಷಗಳ ನಂತರ ಕೋವಿಡ್-19 ಮುಕ್ತ ಬಿಹುವನ್ನು ಆಚರಿಸಲು ಅಸ್ಸಾಂ ಸಜ್ಜಾಗಿದೆ.
ಅಸ್ಸಾಮಿನ ಹೊಸ ವರ್ಷ ಗುರುತಿಸಲು ‘ರೊಂಗಾಲಿ ಬಿಹು’ವನ್ನು ಆಚರಿಸಲಾಗುತ್ತೆ. ಇದು ಶುಕ್ರವಾರ(ನಾಳೆ)ದಿಂದ ಪ್ರಾರಂಭವಾಗುತ್ತಿದ್ದು, ಅಸ್ಸಾಂನ ಅತಿದೊಡ್ಡ ಹಬ್ಬವಾಗಿದೆ. ಆದರೆ ಕಳೆದ 2 ವರ್ಷಗಳಿಂದ ಕೊರೊನಾ ಕಾರಣ ರೊಂಗಾಲಿ ಬಿಹುವನ್ನು ಅದ್ದೂರಿಯಾಗಿ ಆಚರಿಸಿರಲಿಲ್ಲ. ಆದರೆ ಈಗ ಸರ್ಕಾರ ಯಾವುದೇ ನಿರ್ಬಂಧಗಳಿಲ್ಲದೆ ಹಬ್ಬ ಆಚರಿಸಲು ಅನುಮತಿಯನ್ನು ಕೊಟ್ಟಿದೆ. ಈ ಆಚರಣೆಯಲ್ಲಿ ಅಸ್ಸಾಂ ಸಾಂಪ್ರದಾಯಿಕ ಸಂಗೀತ ವಾದ್ಯವಾದ ಧೋಲ್ ಮತ್ತು ಪೇಪಾಯನ್ನು ಬಾರಿಸಿ ಹಬ್ಬವನ್ನು ಪ್ರಾರಂಭ ಮಾಡಲಾಗುತ್ತದೆ. ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ 20 ಅಡಿ ಯಶ್ ಭಾವಚಿತ್ರ
Advertisement
Advertisement
ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಿಹು ಆಚರಣೆ ಮಾಡಲು ನಿರ್ಬಂಧವನ್ನು ಹಾಕಲಾಗಿತ್ತು. ಆದರೆ ಈ ಬಾರಿ ಸರ್ಕಾರದ ಯಾವುದೇ ನಿರ್ಬಂಧವಿಲ್ಲದೆ ಅದ್ದೂರಿ ಆಚರಣೆಗೆ ಅವಕಾಶ ನೀಡಲಾಗಿದೆ. ಈ ಹಬ್ಬವು ವಾರ ಪೂರ್ತಿ ನಡೆಯುತ್ತೆ. ಇದರಲ್ಲಿ ಸಂಗೀತ, ನೃತ್ಯ ಮತ್ತು ಬಿಹು ಸಾಂಪ್ರದಾಯಿಕ ಉಡುಪು ತೊಟ್ಟುಕೊಂಡು ಆಚರಿಸಲಾಗುತ್ತದೆ.
Advertisement
Bohag Bihu greetings to everyone! pic.twitter.com/W5UWbLJhiF
— Narendra Modi (@narendramodi) April 14, 2022
Advertisement
ಈ ಬಾರಿಯೂ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಬೆಲೆ ಏರಿಕೆ ಎದುರಾಗಿದೆ. ರಾಜ್ಯದ ಮಾರುಕಟ್ಟೆಗಳಲ್ಲಿ ದೊಡ್ಡ ಚಿಂತೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ನಿವಾಸಿ ವಿನೋದ್, ಬಿಹು ಹಬ್ಬಕ್ಕೆ ಅನುಮತಿ ಸಿಕ್ಕಿರುವುದು ನಮಗೆ ಸಂತೋಷ. ಆದರೆ ನಾವು ಬಳಸುವ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ನಮಗೆ ಅದ್ದೂರಿ ಆಚರಣೆ ಮಾಡಬೇಕು ಎಂದು ಮನಸ್ಸಿದ್ದರೂ, ಹಣದ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ, ಸ್ಥಳೀಯ ಬಟ್ಟೆ ನೇಕಾರರು ತಮ್ಮ ಬಿಹು ನೇಯ್ಗೆಗಳಿಗೆ ಇನ್ನೂ ಉತ್ತಮ ಬೆಲೆಯನ್ನು ಪಡೆಯುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ
ಬಿಹುದಲ್ಲಿ ಡ್ಯಾನ್ಸ್ ತುಂಬಾ ಮುಖ್ಯವಾಗಿದೆ. ಈ ಹಬ್ಬದಲ್ಲಿ ಡ್ಯಾನ್ಸ್ ಮಾಡಬೇಕು ಎಂದು ಹಲವು ಜನರು ತರಬೇತಿ ಪಡೆದುಕೊಳ್ಳುತ್ತಾರೆ. ಈ ಕುರಿತು ಗುವಾಹಟಿ ತರಬೇತುದಾರ ಬೋಲಿನ್ ಚಂದ್ರ ಬೋರಾ ಮಾತನಾಡಿದ್ದು, ಕಳೆದ ಎರಡು ವರ್ಷಗಳಿಂದ ಬಿಹು ಸಂಭ್ರಮ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. 400 ಹುಡುಗಿಯರು, ಹುಡುಗರು ಬಿಹು ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. ನಾವು ಅವರಿಗೆ ಸಾಂಪ್ರದಾಯಿಕ ವಾದ್ಯಗಳಾದ ಢೋಲ್, ಪೇಪಾ ಮತ್ತು ಗಗೋನಾದಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ವಿವರಿಸಿದರು.