ಸೌತ್ ಸಿನಿರಂಗದ ಬ್ಯೂಟಿ ಕಾಜಲ್ ಅಗರ್ವಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಕಾಜಲ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮುದ್ದು ಮಗನ ಆರೈಕೆಯ ಖುಷಿಯಲ್ಲಿದ್ದಾರೆ. ಇದೀಗ ಮೊದಲ ಬಾರಿಗೆ ಅಭಿಮಾನಿಗಳಿಗೆ ಕಾಜಲ್ ಮಗುವಿನ ಮುಖ ತೋರಿಸಿದ್ದಾರೆ.
ದಕ್ಷಿಣದ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಕಾಜಲ್ ಬೇಡಿಕೆಯಿರುವಾಗಲೇ ಉದ್ಯಮಿ ಗೌತಮ್ ಜೊತೆ ಹಸೆಮಣೆ ಏರಿದ್ದರು. ಮದುವೆಯ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಏಪ್ರಿಲ್ನಲ್ಲಿ ಗಂಡು ಮಗುವಿನ ತಾಯಿಯಾಗಿ, ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗುವಿನ ಮುಖ ಯಾವಾಗ ತೋರಿಸುತ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ಕಾಜಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನು ಓದಿ: ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?
View this post on Instagram
ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಜಲ್, ಮೊದಲ ಬಾರಿಗೆ ಮುದ್ದು ಮಗುವಿನ ಮುಖ ತೋರಿಸಿದ್ದಾರೆ. `ನೀಲ್ ಕಿಚ್ಲು, ನನ್ನ ಜೀವನದ ಪ್ರೀತಿ’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ನಟಿ ರಾಶಿ ಖನ್ನಾ, ಕೀರ್ತಿ ಸುರೇಶ್ ಅನೇಕರು ಕಮೆಂಟ್ ಮಾಡಿಸದ್ದಾರೆ. ಅಭಿಮಾನಿಗಳು ಕಾಜಲ್ ಮಗನ ಫೋಟೋ ನೋಡಿ ದಿಲ್ ಖುಷ್ ಆಗಿದ್ದಾರೆ.