ಬಿ.ಎಸ್. ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ ‘ನಾನು ಅವನಲ್ಲ ಅವಳು’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಅವರು ಅಗಲಿ ಎರಡು ವರ್ಷಗಳಾಗಿದೆ. ಅವರ 2ನೇ ವರ್ಷದ ಪುಣ್ಯ ಸ್ಮರಣೆಯನ್ನು ಇಂದು (ಜೂನ್ 18) ವಿಜಯ್ ಅವರ ಹುಟ್ಟೂರಾದ ಪಂಚನಹಳ್ಳಿಯಲ್ಲಿ ನಡೆಯಿತು.
Advertisement
ತಲೆತಂಡ, ನಾತಿಚರಾಮಿ, ನಾನು ಅವನಲ್ಲ ಅವಳು, ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ್ದ ನಟ ಸಂಚಾರಿ ವಿಜಯ್ ಅವರು ನಿಧನರಾದಾಗ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿಯ ನಡೆಯನ್ನು ಹಾಕಿಕೊಟ್ಟು ಹೋದರು. ವಿಜಯ್ ಅವರ ಸಮಾಜಮುಖಿ ಕೆಲಸಗಳನ್ನು ಅವರ ಗೆಳೆಯರ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ. ಎರಡನೇ ವರ್ಷದ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಇದನ್ನೂ ಓದಿ:ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ
Advertisement
Advertisement
ಸಂಚಾರಿ ವಿಜಯ್ ಅವರ ಕುಟುಂಬ, ಸಂಚಾರಿ ವಿಜಯ್ ಗೆಳೆಯರ ಬಳಗ, ಸಂಚಾರಿ ವಿಜಯ್ ಕಲಾ ಸಂಘ, ಸಂಚಾರಿ ವಿಜಯ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್, ತಾಲೂಕ ಘಟಕ ಕಡೂರು ಇವರ ಸಂಯುಕ್ತ ಆಶ್ರಯದಡಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು. ಜೂನ್ 18ರ ಬೆಳಗ್ಗೆ 10ಗಂಟೆಗೆ ಕಡೂರು ತಾಲೂಕು, ಪಂಚನಹಳ್ಳಿಯಲ್ಲಿರುವ ವಿಜಯ್ ಅವರ ಸಮಾಧಿ ವಿಜಯನಿಧಿ ಬಳಿ ಕಾರ್ಯಕ್ರಮ ಮಾಡಲಾಯಿತು.
Advertisement
ರಕ್ತದಾನ ಶಿಬಿರವನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಪಂಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಗಂಗನಾಯ್ಕ್ ಅಧ್ಯಕ್ಷತೆ ವಹಿಸಲಿದ್ದರು. ವಿಜಯ್ ಕುಟುಂಬದ ಜೊತೆ ಸಂಚಾರಿ ತಂಡದ ಎನ್. ಮಂಗಳಾ, ನಿರ್ದೇಶಕರಾದ ಮಂಸೋರೆ ಹಲವರು ವಿಜಯ್ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದರು.