ಹುಬ್ಬಳ್ಳಿ: ಪರಿಷತ್ ಸದಸ್ಯತ್ವಕ್ಕೆ (Parishad Membership) ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ (Maritibbe Gowda) ರಾಜೀನಾಮೆ (Resignation) ನೀಡಿದ್ದಾರೆ.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ಹುಬ್ಬಳ್ಳಿ ಗೃಹ ಕಚೇರಿಗೆ ಆಗಮಿಸಿದ ಮರಿತಿಬ್ಬೇಗೌಡ, ಹೊರಟ್ಟಿ ಅವರ ಕೈಗೆ ರಾಜೀನಾಮೆ ಪತ್ರ ನೀಡಿದರು. ಇದನ್ನೂ ಓದಿ: ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ – ಬಿಜೆಪಿಯಿಂದ 3ನೇ ಪಟ್ಟಿ ರಿಲೀಸ್
ರಾಜೀನಾಮೆ ಅಂಗೀಕಾರ ಮಾಡಿ ಮಾತನಾಡಿದ ಸಭಾಪತಿಗಳು, ಮರಿತಿಬ್ಬೇಗೌಡ ಯಾರ ಒತ್ತಡವಿಲ್ಲದೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ
ಈಗಾಗಲೇ ಅವರ ರಾಜೀನಾಮೆ ಪರಿಶೀಲನೆ ಮಾಡಿದ್ದೇನೆ. ಅವರ ರಾಜೀನಾಮೆ ಅಂಗೀಕಾರ ಮಾಡಿದ್ದೇನೆ. ಇನ್ನುಮುಂದೆ ಅವರು ಪರಿಷತ್ ಸದಸ್ಯತ್ವ ಕಳೆದುಕೊಂಡಿದ್ದಾರೆಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಐತಿಹಾಸಿಕ ಸೋಲಿನ ಭೀತಿ ಹಿನ್ನೆಲೆ ಬಿಜೆಪಿ ವಿರುದ್ಧ ಆರೋಪ – ಕಾಂಗ್ರೆಸ್ ಆರೋಪಕ್ಕೆ ಜೆಪಿ ನಡ್ಡಾ ತಿರುಗೇಟು