– 3ನೇ ಪಟ್ಟಿಯಲ್ಲೂ ಇಲ್ಲ ಕರ್ನಾಟಕದ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು
ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ತಮಿಳುನಾಡಿನ (Tamil Nadu) 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಕೊಯಮತ್ತೂರಿನಿಂದ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಹಾಗೂ ಚೆನ್ನೈ ದಕ್ಷಿಣದಿಂದ ತೆಲಂಗಾಣ ಮಾಜಿ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರನ್ನು ಕಣಕ್ಕಿಳಿಸಿದೆ. ಇದನ್ನೂ ಓದಿ: ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ
ಕೊಯಮತ್ತೂರಿನಿಂದ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದೆ. ಚೆನ್ನೈ ಕೇಂದ್ರದಿಂದ ಪಿ.ಸೆಲ್ವಮ್, ವೆಲ್ಲೂರಿನಿಂದ ಎ.ಸಿ.ಶಣ್ಮುಗಂ, ಕೃಷ್ಣಗಿರಿ ಸಿ.ನರಸಿಂಹನ್, ನೀಲಗಿರಿ (ಎಸ್ಸಿ) ಕ್ಷೇತ್ರದಿಂದ ಎಲ್.ಮುರುಗನ್, ಪೆರಂಬಲೂರ್ನಿಂದ ಟಿ.ಆರ್.ಪಾರಿವೆಂಧರ್, ತೂತುಕುಡಿಯಿಂದ ನೈನರ್ ನಾಗೇಂದ್ರನ್, ಕನ್ಯಾಕುಮಾರಿ ಕ್ಷೇತ್ರದಿಂದ ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ.