ಬೆಂಗಳೂರು: ನೈಸ್ ಯೋಜನೆ (NICE Project) ಸರ್ಕಾರ ಕೂಡಲೇ ವಶಪಡಿಸಿಕೊಳ್ಳಬೇಕು. ಟೋಲ್ ಸಂಗ್ರಹ ನಿಲ್ಲಿಸಬೇಕು ಅಂತ ಜೆಡಿಎಸ್ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಅವರಿಗೆ ಮನವಿ ಸಲ್ಲಿಕೆ ಮಾಡಿದೆ.
ಜೆಡಿಎಸ್ (JDS) ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ನೇತೃತ್ವದ ಶಾಸಕರ ನಿಯೋಗ ಸಿಎಸ್‌ಗೆ ಮನವಿ ಸಲ್ಲಿಸಿದ್ರು.

ಮನವಿ ಸಲ್ಲಿಕೆ ಬಳಿಕ ಮಾತನಾಡಿದ ಸುರೇಶ್ ಬಾಬು, ನೈಸ್ ಯೋಜನೆಯಲ್ಲಿ ಹಗಲು ದರೋಡೆ ಆಗ್ತಿದೆ. ಯಾರು ಇವರ ರಕ್ಷಣೆ ಮಾಡ್ತಾ ಇದ್ದಾರೆ. ಹೈಕೋರ್ಟ್ ಕೂಡಾ ಟೋಲ್ (Toll) ಸಂಗ್ರಹ ಮಾಡಬಾರದು ಅಂತ ಹೇಳಿದೆ. ಹೀಗಿದ್ರೂ ಟೋಲ್ ಸಂಗ್ರಹ ನಿಲ್ಲಿಸಿಲ್ಲ. ಕೋರ್ಟ್ ಆದೇಶ ಸರ್ಕಾರ ಉಲ್ಲಂಘನೆ ಮಾಡಿದೆ. ಹೀಗಾಗಿ ಸಿಎಸ್ ಮನವಿ ಮಾಡಿದ್ದೇವೆ. ರಾಜ್ಯಪಾಲರಿಗೆ 4 ಗಂಟೆಗೂ ದೂರು ಕೊಡ್ತೀವಿ ಎಂದರು.
ರಾಜ್ಯ ಸರ್ಕಾರ ಇದಕ್ಕೆ ಒಪ್ಪದೇ ಹೋದ್ರೆ ಕೇಂದ್ರ ಸರ್ಕಾರದ ಮೊರೆ ಹೋಗ್ತೀವಿ.ರಾಷ್ಟ್ರಪತಿಗಳಿಗೂ ದೂರು ಕೊಡೊ ಕೆಲಸ ಮಾಡ್ತೀವಿ. ಕೋರ್ಟ್ ಆದೇಶ ಪಾಲನೆ ಸರ್ಕಾರ ಮಾಡಬೇಕು. ರೈತರ ಭೂಮಿಗೆ ಹಣ ಕೊಡಬೇಕು ಅಂತ ಆಗ್ರಹ ಮಾಡಿದ್ರು.
ವಿಧಾನ ಪರಿಷತ್ ಜೆಡಿಎಸ್ ನಾಯಕ ಭೋಜೇಗೌಡ ಮಾತಾಡಿ, ನೈಸ್ ವಿಚಾರದಲ್ಲಿ ಕೋರ್ಟ್ ಆದೇಶ ಮಾಡಿದೆ. ದೇಶದ ದೊಡ್ಡ ಅಕ್ರಮ ಅಂತ ಕೋರ್ಟ್ ಹೇಳಿದೆ. ಟೋಲ್ ಸಂಗ್ರಹ ನಿಲ್ಲಿಸಬೇಕು. ರೈತರಿಗೆ ಬಾಕಿ ಹಣ ಕೊಡಬೇಕು ಅಂತ ಸರ್ಕಾರವನ್ನ ಒತ್ತಾಯ ಮಾಡಿದ್ರು.
