– ಶ್ರೀ ರಾಮನ ಅವತಾರದಲ್ಲಿರುವ ಮೋದಿಯ ಪೋಸ್ಟರ್ ವೈರಲ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುವ ಘೋಷಣೆಗಳೊಂದಿಗೆ ಧಾರ್ಮಿಕ ಶೈಲಿಯ ಕಾರ್ಯಕ್ರಮವೊಂದು ಗುರುವಾರ ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ (Delhi Press Club) ನಡೆದಿದ್ದು, ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿವೆ.
“Shri Narendra Modi Chalisa”#Modi Chalisa Unveiled at Delhi Press Club as Devotees Offer Divine Praise to PM pic.twitter.com/GxA1nKzfE8
— Samitha (@Sam_GomesHere) August 20, 2026
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Modi) ಅವರು ಬಿಲ್ಲು-ಬಾಣ ಹಿಡಿದು ಶ್ರೀರಾಮನ ಅವತಾರದಲ್ಲಿ ನಿಂತಿರುವಂತಹ ಪೋಸ್ಟರ್‌ವೊಂದರ ಮುಂದೆ ಕೆಲವರು ಆರತಿ ನೆರವೇರಿಸುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಭಾಗವಹಿಸಿದ್ದವರು ʻಜೈ ಜೈ ಮೋದಿ, ಹರ ಹರ ಮೋದಿʼ (Jai Jai Modi, Har Har Modi) ಎಂದು ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ಈ ಕಾರ್ಯಕ್ರಮವನ್ನು ಕ್ಲಬ್ ಆಯೋಜಿಸಿರಲಿಲ್ಲ. ಪತ್ರಿಕಾಗೋಷ್ಠಿ ನಡೆಸುವ ಉದ್ದೇಶಕ್ಕಾಗಿ ಸಂಸ್ಥೆಯೊಂದಕ್ಕೆ ಸಭಾಂಗಣವನ್ನು ಬಾಡಿಗೆಗೆ ನೀಡಲಾಗಿತ್ತು ಎಂದು ಹೇಳಿದೆ. ಆದ್ರೆ ಸಭಾಂಗಣ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ನಿಗದಿಪಡಿಸಿದ್ದ ನಿಯಮಗಳನ್ನು ಆಯೋಜಕರು ಉಲ್ಲಂಘಿಸಿದ್ದಾರೆ ಎಂದು ಪ್ರೆಸ್ ಕ್ಲಬ್ ತಿಳಿಸಿದೆ. ಈ ಉಲ್ಲಂಘನೆ ಗಮನಕ್ಕೆ ಬಂದ ತಕ್ಷಣ ಕ್ಲಬ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನ ನಿಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
#MODI TEMPLE’S KUDA KADTE POOJALU START CHESTAM🙌#MODI CHALISA PERFORMED IN #DELHI , #PRESSCLUB . pic.twitter.com/tcdLqlwH66
— TELUGU FAB (@telugufab) August 20, 2026
ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ತನ್ನ ಆವರಣದಲ್ಲಿ ನಡೆದ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ ಮತ್ತು ಬಾಡಿಗೆಗೆ ನೀಡಿದ್ದ ಸಭಾಂಗಣದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನು ತಡೆದಿದ್ದಾರೆ ಎಂದು ತಿಳಿಸಿದೆ.
ಈ ಸ್ಪಷ್ಟನೆಯ ಬೆನ್ನಲ್ಲೇ ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

