ಬಿಗ್ಬಾಸ್ ಮನೆಯಲ್ಲಿ ಬದಲಾವಣೆ ತುಂಬಾ ಅನಿವಾರ್ಯತೆ. ಆದರೆ ಅದ್ಯಾಕೋ ಜಯಶ್ರೀ ಮತ್ತೆ ಬದಲಾದಂತೆ ಕಾಣುತ್ತಲೇ ಇಲ್ಲ. ಯಾಕೆಂದರೆ ಇಂದು ಮನೆಯವರೆಲ್ಲಾ ಸೇರಿ ಕಷ್ಟದ ಗಿಫ್ಟ್ ನೀಡಿದಾಗಲೇ ಜಯಶ್ರೀ ಮೇಲಿರುವ ಒಪಿನಿಯನ್ ಇನ್ನು ಕೂಡ ಬದಲಾಗಿಲ್ಲ ಎಂಬುದು ತಿಳಿದುಬಂದಿದೆ. ಕಳೆದ ವಾರ ಸುದೀಪ್ ಕೂಡ ಜಯಶ್ರೀಗೆ ಕಿವಿ ಮಾತು ಹೇಳಿದ್ದರು. ರಿವೆಂಜ್ ತಪ್ಪು ಎಂಬುದನ್ನು ಮನವರಿಕೆ ಮಾಡಿದ್ದರು. ಹೌದು ಈ ಬಗ್ಗೆ ರಿಯಲೈಸ್ ಆಗಿದೆ. ಸರಿ ಮಾಡಿಕೊಳ್ಳುತ್ತೀನಿ ಎಂದಿದ್ದ ಜಯಶ್ರೀ ಇನ್ನು ಸರಿಯಾಗಿಲ್ಲ ಎಂಬ ಅನುಮಾನ ಕಾಡುವುದಕ್ಕೆ ಶುರುವಾಗಿದೆ.
Advertisement
ಇಂದು ಇಷ್ಟ ಕಷ್ಟದ ಆಟ ಆಡುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಹೇಳಿತ್ತು. ಅದಕ್ಕೆಂದೇ ಒಂದಷ್ಟು ಗಿಫ್ಟ್‌ಗಳಿರುವ ಬಾಕ್ಸ್ ಅನ್ನು ನೀಡಿತ್ತು. ಇಷ್ಟವಾದವರಿಗೆ ಇಷ್ಟದ ಗಿಫ್ಟ್, ಕಷ್ಟ ಎನಿಸಿದವರಿಗೆ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಹೆಚ್ಚಿನ ಸದಸ್ಯರು ಇಷ್ಟದ ಗಿಫ್ಟ್ ನೀಡಲು ಆರ್ಯವರ್ಧನ್ ಗುರೂಜಿಯವರನ್ನು ಆಯ್ದುಕೊಂಡರು. ಅದೇ ರೀತಿ ಹೆಚ್ಚು ಜನ ಕಷ್ಟದ ಗಿಫ್ಟ್ ನೀಡಲು ಜಯಶ್ರೀಯನ್ನು ಆಯ್ದುಕೊಂಡರು. ಬೇಡ ಎಂಬ ವಿಚಾರ ಬಂದಾಗೆಲ್ಲಾ ಹೆಚ್ಚಿನ ಬಾರಿ ಆಯ್ಕೆಯಾಗುತ್ತಿರುವುದು ಜಯಶ್ರೀಯವರಾಗಿದ್ದಾರೆ.
Advertisement
Advertisement
ಮೊದಲಿಗೆ ನಂದಿನಿ ತಮ್ಮ ಗಿಫ್ಟ್ ನೀಡಲು ಬಂದರು. ಬೆಸ್ಟ್ ಗಿಫ್ಟ್ ತೆಗೆದುಕೊಂಡು ಸಾನ್ಯಾಗೆ ಪ್ರಿಫರೆನ್ಸ್ ನೀಡಿದರು. ಸಾನ್ಯಾ ಬಗ್ಗೆ ತಮಗಿರುವ ಒಪಿನಿಯನ್ ಕೂಡ ಹಂಚಿಕೊಂಡರು. ಆ ಗಿಫ್ಟ್ ಕೊಟ್ಟು ಲೈಫ್ ಲಾಂಗ್ ಫ್ರೆಂಡ್ ಅಂತ ತಬ್ಬಿದರು. ನಂತರ ಕಷ್ಟದ ಗಿಫ್ಟ್ ನೀಡಬೇಕಾಗಿತ್ತು. ಆ ವೇಳೆ ಜಯಶ್ರೀಯನ್ನು ಆಯ್ಕೆ ಮಾಡಿಕೊಂಡರು. ಬೇರೆ ಯಾವ ಕಾರಣವೂ ಇಲ್ಲ. ಆದರೆ ಮಾತು ಕಡಿಮೆ ಮಾಡಿದರೆ ಬೆಟರ್ ಎಂದುಕೊಂಡು ಈ ಗಿಫ್ಟ್ ಅನ್ನು ಜಯಶ್ರೀಗೆ ನೀಡುತ್ತಿದ್ದೇನೆ ಎಂದರು. ಗಿಫ್ಟ್ ತೆಗೆದುಕೊಂಡ ಜಯಶ್ರೀ ಮುಖದಲ್ಲಿ ನಂದಿನಿ ಕಂಡರೆ ಇಷ್ಟವಿಲ್ಲದ ರೀತಿಯ ಭಾವವೇ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ
Advertisement
ನೆಕ್ಸ್ಟ್ ಸೋಮಣ್ಣ ಕೂಡ ಎರಡು ಗಿಫ್ಟ್ ಆಯ್ಕೆ ಮಾಡಿಕೊಂಡರು. ಮೊದಲು ಇಷ್ಟದ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ನೀಡಲಾಯಿತು. ಅದಕ್ಕೆ ಕಾರಣವೆಂದರೆ ಆರ್ಯವರ್ಧನ್ ಮಾಡುತ್ತಿದ್ದ ಕೇರಿಂಗ್. ಸೋಮಣ್ಣ ಅವರು ಆ ಬಗ್ಗೆ ಹಂಚಿಕೊಂಡಿದ್ದು ಹೀಗೆ, ನನಗೆ ಸೋದರ ಭಾವ ಬರಿಸಿದರು. ಊಟದ ವಿಚಾರದಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ನನ್ನನ್ನು ಕೇರ್ ಮಾಡಿದ್ದಾರೆ. ಒಮ್ಮೊಮ್ಮೆ ಊಟ ಸಾಕಾಗಿಲ್ಲ ಎಂದಾಗ ಅವರ ಊಟದಲ್ಲಿ ಯಾರಿಗೂ ಕಾಣದ ಹಾಗೇ ತಂದು ನನಗೆ ಕೊಟ್ಟಿದ್ದಾರೆ. ಗಂಜಿಗೆ ತುಪ್ಪ ಬೆರೆಸಿಕೊಂಡು ಬಂದು ತಿನ್ನು ಎನ್ನುತ್ತಿದ್ದರು. ಹೀಗಾಗಿ ಈ ಗಿಫ್ಟ್ ಅವರಿಗೆ ಕೊಡಬೇಕು ಎಂದು ಕೊಟ್ಟಿದ್ದಾರೆ.
ಕಷ್ಟದ ಗಿಫ್ಟ್ ಅನ್ನು ಜಯಶ್ರೀಗೆ ನೀಡಿದ್ದು, ಈ ಮನೆಯಲ್ಲಿ ಕೆಲವೊಂದು ಸಲ ಒಳ್ಳೆಯದ್ದನ್ನು ಹೇಳಿದರೂ ತಪ್ಪಾಗುತ್ತದೆ. ಆದರೆ ಈ ಮನೆಯಲ್ಲಿ ಸ್ವಲ್ಪ ಅವರು ಬದಲಾಗಬೇಕು ಎಂಬುದಷ್ಟೇ. ಬೇರೆ ಏನನ್ನು ಯೋಚಿಸಬೇಡ ಎಂದು ಜಯಶ್ರೀಗೆ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ನಿಜ ವಯಸ್ಸು ರಿವೀಲ್ ಮಾಡಿದ ಸೋನು ಗೌಡ..!
ನಂತರ ಬಂದ ಸಾನ್ಯಾ ತಮ್ಮ ಬೆಸ್ಟ್ ಗಿಫ್ಟ್, ಪ್ಲಾಂಟ್ ಅನ್ನು ರೂಪೇಶ್‍ಗೆ ಕೊಟ್ಟಿದ್ದಾರೆ. ನೀನು ಮಂಗಳೂರಲ್ಲಿ ಇರುತ್ತೀಯಾ ಬೆಂಗಳೂರಲ್ಲಿ ಇರಲ್ಲ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನ ಆಫೀಸ್ ಅಥವಾ ಮನೆಯಲ್ಲಿ ಇಟ್ಟುಕೋ ನೋಡಿದಾಗೆಲ್ಲಾ ನಾನೇ ಕೊಟ್ಟಿದ್ದು ಎಂದು ನೆನಪಾಗಲಿ ಎಂದಿದ್ದಾರೆ. ಅಟ್ ದಿ ಸೇಮ್ ಟೈಮ್ ಕಷ್ಟದ ಉಡುಗೊರೆಯನ್ನು ಜಯಶ್ರೀಗೆ ನೀಡಿದ್ದಾರೆ. ಈ ಮನೆಯಲ್ಲಿ ಪ್ರತಿಯೊಂದನ್ನು ದುರ್ಬಿನ್ ಹಾಕಿ ಹುಡುಕುತ್ತಾರೆ. ಪ್ರತಿಯೊಂದು ಪಾಯಿಂಟ್ ಮಾಡಿ ಹೇಳುವುದನ್ನು ನಿಲ್ಲಿಸಬೇಕು. ನಾವೆಲ್ಲರೂ ಮನುಷ್ಯರೇ ತಪ್ಪು ಮಾಡುತ್ತೀವಿ. ಅದನ್ನು ತಿದ್ದಿಕೋ. ಇದನ್ನು ಬಿಸಿಲಿನಲ್ಲಿ ಹಿಡಿದು ನೋಡು ವಜ್ರದಂತೆ ಹೊಳೆಯುತ್ತೀಯಾ ಎಂದು ಕಾಮಿಡಿ ಮಾಡಿದ್ದಾರೆ.