CricketLatestLeading NewsMain PostNationalSports

ಗುಜರಾತ್‌ ಟೈಟನ್ಸ್‌ಗೆ ರೋಚಕ ಜಯ – ಬಹುತೇಕ ಪ್ಲೇ ಆಫ್‌ಗೆ ಎಂಟ್ರಿ

ಮುಂಬೈ:  ರಾಹುಲ್ ತೆವಾಟಿಯ ಹಾಗೂ ಡೇವಿಡ್ ಮಿಲ್ಲರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ ವಿರುದ್ಧ ಗುಜರಾತ್ ತಂಡವು 6 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ ಪ್ಲೇ ಆಫ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ.

ಮುಂಬೈನ ಬ್ರಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗಿಳಿದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬ್ಯಾಟ್ ಮಾಡಿ ಗುಜರಾತ್‌ಗೆ 171 ರನ್‌ಗಳ ಗುರಿ ನೀಡಿತ್ತು. ಈ ರನ್‌ಗಳ ಗುರಿ ಪಡೆದ ಗುಜರಾತ್ ಟೈಟನ್ಸ್ ತಂಡವು  19.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್ ಸಿಡಿಸಿ ಗೆಲುವು ದಾಖಲಿಸಿತು.

IPL 2022 GUJARATH VS RCB 05

ಕಳೆದ ನಾಲ್ಕೈದು ಪಂದ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಜವಾಬ್ದಾರಿ ಅರ್ಧಶತಕ ಸಿಡಿಸಿದ್ದಾರೆ. 45 ಎಸೆತಗಳಿಗೆ 50 ರನ್ ಬಾರಿಸುವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದನ್ನು ಸಾಬೀತು ಮಾಡಿದ್ದಾರೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಗರಿಷ್ಟ 48 ರನ್ ಗಳಿಸಿದ್ದರು. ಎರಡು ಬಾರಿ ಅರ್ಧಕ ಶತಕ ಕೈತಪ್ಪಿತ್ತು. ಕೊನೆಯ 3 ಪಂದ್ಯಗಳಲ್ಲಿ, 2 ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿ, ಒಂದು ಪಂದ್ಯದಲ್ಲಿ 9 ರನ್‌ಗಳಿಸಿ ಭಾರೀ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಎಲ್ಲ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿರುವ ವಿರಾಟ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

IPL 2022 GUJARATH VS RCB 05

ಈ ಪಂದ್ಯದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 53 ಎಸೆತಗಳಿಗೆ 58 ರನ್ ಬಾರಿಸಿ (53 ಎಸೆತ, 6 ಫೋರ್, 1 ಸಿಕ್ಸರ್) ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ಔಟಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದರ್ ಹಾಗೂ ವಿರಾಟ್ ಕೊಹ್ಲಿ ಅವರ ಜೊತೆಯಾಟ 74 ಎಸೆತಗಳಲ್ಲಿ 99 ರನ್‌ಗಳನ್ನು ಕಲೆಹಾಕಿತು. ಇನ್ನು ರಜತ್ ಪಾಟಿದರ್ ಸಹ ಭರ್ಜರಿ 52 ರನ್ ಬಾರಿಸಿ (32 ಎಸೆತ, 5 ಫೋರ್, 2 ಸಿಕ್ಸರ್) ಮಿಂಚಿದರು. ಇವರಿಬ್ಬರ ಸಾಂಗಿಕ ಬ್ಯಾಟಿಂಗ್ ಪ್ರದರ್ಶದಿಂದ ತಂಡವು 16 ಓವರ್‌ಗಳಲ್ಲಿ 120 ರನ್‌ಗಳ ಗಡಿ ದಾಟಿತ್ತು.

IPL 2022 GUJARATH VS RCB 4

ನಂತರ ಕಣಕ್ಕಿಳಿದ ಸಿಕ್ಸರ್‌ವೀರ ಗ್ಲೇನ್ ಮ್ಯಾಕ್ಸ್‌ವೆಲ್‌ ಕೇವಲ 18 ಎಸೆತಗಳಲ್ಲಿ 2 ಸಿಕ್ಕರ್, 3 ಬೌಂಡರಿಗಳನ್ನು ಸಿಡಿಸುವ ಮೂಲಕ 33 ರನ್ ಪೇರಿಸಿದರು. ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್ ತಲಾ 2 ರನ್‌ಗಳಿಸಿದರು. ಕೊನೆಯಲ್ಲಿ ಬ್ಯಾಟಿಂಗಿಳಿದ ಮಹಿಪಾಲ್ ಲೊಮ್ರೋರ್ 8 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿ, 16 ರನ್ ಕಮಾಲ್ ಮಾಡಿದರು. ಇದರಿಂದಾಗಿ ತಂಡವು ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 170 ರನ್‌ಗಳನ್ನು ಬಾರಿಸಿ, ಎದುರಾಳಿ ಗುಜರಾತ್ ಟೈಟನ್ಸ್‌ಗೆ 171 ರನ್‌ಗಳ ಗುರಿ ನೀಡಿತು.

IPL 2022 GUJARATH VS RCB 4

ಶುಭಾರಂಭ ನೀಡಿದ ಗಿಲ್-ಸಹಾ: 15 ಐಪಿಎಲ್ ಅವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟನ್ಸ್ ತಂಡವು ಉತ್ತಮ ಫಾರ್ಮ್‌ನಲ್ಲಿದ್ದು ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತು. ಆರಂಭದಲ್ಲಿ ಕ್ರೀಸ್‌ಗಿಳಿದ ಶುಭಮನ್ ಗಿಲ್, ವೃದ್ಧಿಮಾನ್ ಸಹಾ ಅವರ ಜೊತೆಯಾಟ ಉತ್ತಮ ಶುಭಾರಂಭ ನೀಡಿತು. 45 ಎಸೆತಗಳಲ್ಲಿ 51 ರನ್ ಕಲೆಹಾಕಿತ್ತು.

ಈ ವೇಳೆ ಸಹಾ 23 ರನ್ (22 ಎಸೆತ, 4 ಬೌಂಡರಿ) ನಿರ್ಗಮಿಸಿದರೆ, ಗಿಲ್ 31 ರನ್ (28 ಎಸೆತ, 3 ಫೋರ್, 1 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಾಯಿ ಸುದರ್ಶನ್ 20 ರನ್ ಗಳಿಸಿದರು. ಫಾರ್ಮ್‌ನಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 5 ಎಸೆತಗಳಲ್ಲಿ 3 ರನ್ ಗಳಿಸಿ ನಿರ್ಗಮಿಸಿದ್ದು, ಗುಜರಾಜ್‌ಗೆ ದೊಡ್ಡ ಆಘಾತ ನೀಡಿತು. ಈ ವೇಳೆಗೆ ತಂಡ 10.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 78 ರನ್ ಗಳಿಸಿತ್ತು.

IPL 2022 GUJARATH VS RCB 3

ತೆವಾಟಿಯಾ – ಮಿಲ್ಲರ್‌ ಬ್ಯಾಟಿಂಗ್‌ ಅಬ್ಬರ: 
5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿನವು ತಂಡದ ಗೆಲುವಿಕೆ ಕಾರಣವಾಯಿತು. ಮಿಲ್ಲರ್‌, ತೆವಾಟಿಯಾ ಕೇವಲ 40 ಎಸೆತಗಳಲ್ಲಿ 79 ರನ್‌ ಚಚ್ಚಿದರು. ಡೇವಿಡ್ ಮಿಲ್ಲರ್ 24 ಎಸೆತಗಳಲ್ಲಿ 39 (1 ಸಿಕ್ಸರ್‌, 4 ಬೌಂಡರಿ) ರನ್ ಗಳಿಸಿದರೆ, ರಾಹುಲ್ ತೆವಾಟಿಯಾ 25 ಎಸೆತಗಳಲ್ಲೇ 43 ರನ್‌ (2 ಸಿಕ್ಸರ್‌, ಬೌಂಡರಿ) ಪೇರಿಸಿ ತಂಡಕ್ಕೆ ರೋಚಕ ಜಯ ತಂಡುಕೊಟ್ಟರು.

Leave a Reply

Your email address will not be published.

Back to top button