ಮುಂಬೈ: ಆರ್‌ಸಿಬಿ ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಟೋ ಹತ್ತಿ ಬೆಂಗಳೂರು ರೌಂಡ್ ಹೊಡೆದ ಘಟನೆ ಎಲ್ಲರಿಗೂ ತಿಳಿದಿದೆ. ಆದರೆ ಆಸೀಸ್ ಮಾಜಿ ಆಟಗಾರ ಬ್ರೆಟ್ ಲೀ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು ವೃದ್ಧನ ವೇಷ ಧರಿಸಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿ ಸುದ್ದಿಯಾಗಿದ್ದಾರೆ.
ಸದ್ಯ ಐಪಿಎಲ್ ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಬ್ರೆಟ್ ಲೀ ಮುಂಬೈ ಶಿವಾಜಿ ಪಾರ್ಕ್ ತೆರಳಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಆಟವಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮದ ಭಾಗವಾಗಿ ಬ್ರೆಟ್ ಲೀ ಅಲ್ಲಿಗೆ ತೆರಳಿದ್ದರು ಎಂದು ವರದಿಯಾಗಿದೆ.
Advertisement
A ragged, old man turned up at a local park to play cricket with the kids – little did they realise it was none other than @BrettLee_58! Watch many such unique stories only on #SuperSunday, on Star Sports. pic.twitter.com/hVPrdfiVQJ
— Star Sports (@StarSportsIndia) April 27, 2018
Advertisement
ಮುಂಬೈನ ಶಿವಾಜಿ ಪಾರ್ಕ್ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ಅಭ್ಯಾಸ ನಡೆಸುತ್ತಿದ್ದ ಕಾರಣ ಹೆಚ್ಚು ಫೇಮಸ್. ಅದ್ದರಿಂದಲೇ ಇದೇ ಸ್ಥಳವನ್ನು ಬ್ರೆಟ್ ಲೀ ಆಯ್ಕೆ ಮಾಡಿ ಆಟವಾಡಲು ತೆರಳಿದ್ದರು.
Advertisement
ವಯೋವೃದ್ಧರ ಹಾಗೇ ವೇಷಧರಿಸಿದ್ದ ಬ್ರೆಟ್ ಲೀ ನೇರವಾಗಿ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಸಲಹೆ ಪಡೆದು ಆಟವಾಡಿದ್ದಾರೆ. ಬಳಿಕ ಭರ್ಜರಿ ಸಿಕ್ಸರ್ ಹಾಗೂ ಬೌಲಿಂಗ್ ಮಾಡಿ ಎಲ್ಲರನ್ನೂ ಅಚ್ಚರಿಗೆ ಗುರಿಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿನ ಹುಡುಗರು ಕುತೂಹಲದಿಂದ ಅವರ ಬಗ್ಗೆ ಪ್ರಶ್ನಿಸಿದ್ದು ಈ ವೇಳೆ ಬ್ರೆಟ್ ಲೀ ತಮ್ಮ ವೇಷ ತೆಗೆದು ಎಲ್ಲರನ್ನು ಅಚ್ಚರಿಗೆ ಗುರಿಮಾಡಿದ್ದಾರೆ. ಈ ವೇಳೆ ಅಲ್ಲಿನ ಹುಡುಗರೊಂದಿಗೆ ಸೆಲ್ಫಿಗೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ವಿಡಿಯೋವನ್ನು ಖಾಸಗಿ ವಾಹಿನಿ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.