ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ಗೆಲುವಿನ ತುತ್ತತುದಿಯಲ್ಲಿದ್ದಾಗಲೂ ಬಾಲಿವುಡ್ ಸಿನಿಮಾ ರಂಗದಿಂದ ಅವರಿಗೆ ಅವಮಾನ ಆಗಿತ್ತಂತೆ. ಈ ವಿಷಯವನ್ನು ಸ್ವತಃ ಚಿರಂಜೀವಿ ಅವರೇ ಆಚಾರ್ಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಸಂದರ್ಭದಲ್ಲಿ ಮಾತನಾಡಿದ್ದಾರೆ. ಹಿಂದಿ ಸಿನಿಮಾವನ್ನು ಭಾರತೀಯ ಸಿನಿಮಾ ಎನ್ನುವಂತೆ ಬಿಂಬಿಸಲಾಗುತ್ತಿತ್ತು. ಅದಕ್ಕೆ ವಿರೋಧಿಸುವಂತಹ ಶಕ್ತಿಯೂ ಆ ವೇಳೆಯಲ್ಲಿ ಇರಲಿಲ್ಲ ಎನ್ನುವುದನ್ನು 1989ರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ
Advertisement
ಚಿರಂಜೀವಿ ನಟನೆಯ ರುದ್ರವೀಣೆ ಚಿತ್ರಕ್ಕಾಗಿ ನರ್ಗಿಸ್ ದತ್ ಪ್ರಶಸ್ತಿ ದೊರೆತಾಗ, ಆ ಸಮಾರಂಭಕ್ಕೆ ಚಿರಂಜೀವಿ ಅವರನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿತ್ತು. ಸಂಪ್ರದಾಯದಂತೆ ಪ್ರಶಸ್ತಿ ಪ್ರದಾನ ಸಮಾರಂಭದ ಒಂದು ದಿನ ಮುಂಚೆ ಸರಕಾರವು ಚಹಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಸಿನಿಮಾ ರಂಗವನ್ನು ಬಿಂಬಿಸುವಂತಹ ಛಾಯಾಚಿತ್ರಗಳನ್ನು ಅಲ್ಲಿ ಅಂಟಿಸಲಾಗಿತ್ತು. ಅಮಿತಾಭ್, ಪೃಥ್ವಿರಾಜ್ ಕಪೂರ್, ಸಂಜಯ್ ಸೇರಿದಂತೆ ಹಲವು ಹಿಂದಿ ಕಲಾವಿದರ ಮತ್ತು ಹೆಸರಾಂತ ತಂತ್ರಜ್ಞರ ಫೋಟೋಗಳನ್ನು ಹಾಕಲಾಗಿತ್ತು. ಆದರೆ, ದಕ್ಷಿಣದವರ ಒಂದೇ ಒಂದು ಫೋಟೋ ಇರಲಿಲ್ಲ ಎಂದು ನೆನಪಿಸಿಕೊಂಡರು ಮೆಗಾಸ್ಟಾರ್. ಇದನ್ನೂ ಓದಿ : ಪ್ರಧಾನಿ ಮೋದಿ ಕೈ ಸೇರಿದ ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ
Advertisement
Advertisement
ದಕ್ಷಿಣದ ಸಿನಿಮಾ ಕ್ಯಾಟಗರಿಯಲ್ಲಿ ಕೇವಲ ಜಯಲಲಿತಾ ಮತ್ತು ಎಂಜಿಆರ್ ಸ್ಟಿಲ್ ಇದ್ದವು. ಪ್ರೇಮ್ ನಜೀರ್ ಅವರಿಗೆ ಸ್ವಲ್ಪ ಜಾಗ ನೀಡಲಾಗಿತ್ತು. ದಕ್ಷಿಣದವರು ಅಂದರೆ, ಇವರಷ್ಟೆನಾ? ಎನ್ನುವ ಅನುಮಾನ ಅವರಿಗೆ ಮೂಡಿತ್ತಂತೆ. ‘ದಕ್ಷಿಣದ ಮೇರು ನಟ ರಾಜ್ ಕುಮಾರ್, ವಿಷ್ಣುವರ್ಧನ್, ನಾಗೇಶ್ವರ್ ರಾವ್, ಶಿವಾಜಿ ಗಣೇಶ್ ಹೀಗೆ ದಿಗ್ಗಜರೇ ತುಂಬಿರುವ ಸಿನಿಮಾ ರಂಗದಲ್ಲಿ ಅವರಿಗೆ ಅಲ್ಲಿ ಸ್ಥಾನವನ್ನೇ ಕೊಟ್ಟಿರಲಿಲ್ಲ’ ಎಂದು ವಿಷಾದ ವ್ಯಕ್ತ ಪಡಿಸಿದರು. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′
Advertisement
ಹಲವು ವರ್ಷಗಳಿಂದ ಭಾರತೀಯ ಸಿನಿಮಾ ರಂಗವೆಂದರೆ ಅದು ಹಿಂದಿ, ಉಳಿದವುಗಳು ಪ್ರಾದೇಶಿಕ ಸಿನಿಮಾಗಳಾಗಿವೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಕ್ಷಿಣದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ದಕ್ಷಿಣದ ಸಿನಿಮಾಗಳು ಹಿಂದಿಯನ್ನೂ ಮೀರಿ ನಡೆಯುತ್ತಿವೆ ಎಂದು ಹೆಮ್ಮೆಯಿಂದ ಮಾತನಾಡಿದರು ಚಿರಂಜೀವಿ.