Bengaluru CityBollywoodCinemaKarnatakaLatestMain PostSandalwood

ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′

ವಿಶ್ವಾದ್ಯಂತ ಸಂಚಲನ ಮೂಡಿಸುತ್ತಿರುವ ಸಿನಿಮಾ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′. ಎಲ್ಲರ ನಿರೀಕ್ಷೆಯನ್ನು ಮೀರಿ ಕೋಟಿ ಕೋಟಿ ಲೂಟಿ ಮಾಡ್ತಿದೆ ಯಶ್ ನಟನೆಯ ಸಿನಿಮಾ. ಪ್ಯಾನ್ ಇಂಡಿಯಾ ಚಿತ್ರವಾಗಿ ಗೆಲುವಿನ ಜಯಭೇರಿ ಬಾರಿಸಿರೋ ಚಿತ್ರ ಹಿಂದಿ ಸಿನಿರಸಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್ ಚಿತ್ರ ಸಂಚಲನ ಮೂಡಿಸುತ್ತಿದೆ.

kgf 2

ಪ್ರಶಾಂತ್ ನೀಲ್ ಮತ್ತು ಯಶ್ ನಟನೆಯ ಕೆಜಿಎಫ್ 2 ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗಿತ್ತು. ಬಿಡುಗಡೆಯಾಗಿ 11 ದಿನಗಳಾದರೂ ಗಳಿಕೆಯಲ್ಲಿ ಹಿಂದೆ ಬೀಳದೇ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಎಲ್ಲಾ ಕಡೆಯಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. 10ನೇ ದಿನಗಳವರೆಗೆ ಹಿಂದಿಯಲ್ಲಿ `ಕೆಜಿಎಫ್ 2′ 298.44 ಕೋಟಿ ರೂಪಾಯಿ ಬಾಚಿತ್ತು. 11ನೇ ದಿನ ಭಾನುವಾರ ಸಿನಿಮಾ 300 ಕೋಟಿ ರೂ. ಗಡಿ ದಾಟಿದೆ. ಈ ಮೂಲಕ ತ್ರಿಶತಕದ ಕ್ಲಬ್ ಸೇರಿದ ಕೆಲವೇ ಕೆಲವು ಸಿನಿಮಾಗಳ ಸಾಲಿಗೆ `ಕೆಜಿಎಫ್ 2′ ಕೂಡ ಸೇರ್ಪಡೆ ಆಗಿದೆ.

ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ನಿರ್ದೇಶನದ ಜತೆ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್, ಮಾಳವಿಕಾ ಈ ಕಲಾವಿದರ ನಟನೆ ತೆರೆಯ ಮೇಲೆ ಮ್ಯಾಜಿಕ್ ಮಾಡಿದೆ.ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಜಾಸ್ತಿ ಆಗುತ್ತಿದೆ.

`ಕೆಜಿಎಫ್ ಚಾಪ್ಟರ್ 1′ ಮತ್ತು `ಕೆಜಿಎಫ್ 2′ ಚಿತ್ರಗಳು ರೆಕಾರ್ಡ್ ಬ್ರೇಕ್ ಮಾಡ್ತು. ಕೆಜಿಎಫ್ ಎರಡು ಭಾಗಗಳನ್ನ ನೋಡಿ ಫಿದಾ ಆಗಿರೋ ಅಭಿಮಾನಿಗಳು ಕೆಜಿಎಫ್ 3ಗಾಗಿ ಕಾಯ್ತಿದ್ದಾರೆ.

Leave a Reply

Your email address will not be published.

Back to top button