ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಂತರ ನಾನಾ ಕಾರಣಗಳಿಂದಾಗಿ ಬಾಲಿವುಡ್ ನಟ ಅನುಪಮ್ ಖೇರ್ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಅವರ ಆಧ್ಯಾತ್ಮಿಕ ಜೀವನದ ಬಗ್ಗೆ ಒಂದೊಂದೇ ಪುಟಗಳು ತೆರೆದುಕೊಳ್ಳುತ್ತಿವೆ. ಮೊನ್ನೆಯಷ್ಟೇ ಅನುಪಮ್ ಖೇರ್ ಮನೆಗೆ ಬಂದಿದ್ದ ಸ್ವಾಮಿಗಳು, ಅವರ ಮನೆಯಲ್ಲೇ ಪೂಜೆ ಸಲ್ಲಿಸಿ ಹೋಗಿದ್ದರು. ಇದನ್ನೂ ಓದಿ : ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಯಶ್ ಮೇನಿಯಾ: 300 ಕೋಟಿ ಬಾಚಿದ `ಕೆಜಿಎಫ್ 2′
Advertisement
ಅಲ್ಲದೇ ಅನುಪಮ್ ಖೇರ್ ಅವರ ತಾಯಿ ಕೂಡ ಆಧ್ಯಾತ್ಮ ಜೀವ. ಶಿವನ ಆರಾಧಕರು. ಹಾಗಾಗಿ ಅವರು ವಿಶೇಷವಾದ ರುದ್ರಾಕ್ಷಿಯೊಂದನ್ನು ಖರೀದಿಸಿದ್ದಾರೆ. ಆ ರುದ್ರಾಕ್ಷಿ ಖರೀದಿಸಿದ್ದು ತಮ್ಮ ಕುಟುಂಬದ ಸದಸ್ಯರಿಗೆ ಕೊಡುವುದಕ್ಕೆ ಅಲ್ಲ, ಬದಲಾಗಿ ಮಗನ ಕೈಗೆ ಅದನ್ನು ಕೊಟ್ಟು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲು ವಿನಂತಿಸಿದ್ದಾರೆ. ಇದನ್ನೂ ಓದಿ:ಸೀಮಂತದ ಸಂಭ್ರಮದಲ್ಲಿ ನಟಿ ಸಂಜನಾ ಗಲ್ರಾನಿ
Advertisement
Advertisement
ತಾಯಿಯ ಆಸೆಯಂತೆ ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಅನುಪಮ್ ಖೇರ್, ತಾಯಿ ಕೊಟ್ಟ ರುದ್ರಾಕ್ಷಿ ಮಾಲೆಯನ್ನು ಪ್ರಧಾನಿಗೆ ನೀಡಿದ್ದಾರೆ. ಭೇಟಿ ವೇಳೆ ‘ದೇಶ, ದೇಶವಾಸಿಗಳನ್ನು ರಕ್ಷಿಸುತ್ತಿರುವ ನಿಮ್ಮ ರಕ್ಷಣೆಗೆ ಈ ರುದ್ರಾಕ್ಷಿ ಮಾಲೆಯನ್ನು ನನ್ನ ತಾಯಿ ಕಳುಹಿಸಿದ್ದಾರೆ. ಇದು ನಿಮ್ಮನ್ನು ಕಾಪಾಡುತ್ತದೆ ಎನ್ನುವುದು ನನ್ನ ತಾಯಿಯ ಅಚಲವಾದ ನಂಬಿಕೆ. ನಿಮಗೆ ಒಳ್ಳೆದಾಗುತ್ತದೆ’ ಎಂದು ಹಾರೈಸಿ ರುದ್ರಾಕ್ಷಿ ಮಾಲೆಯನ್ನು ಮೋದಿ ಅವರಿಗೆ ನೀಡಿದ್ದಾರೆ. ಇದನ್ನೂ ಓದಿ: ಡಾ.ರಾಜ್ ಮೊಮ್ಮಗಳ `ಕಾಲಾಪತ್ಥರ್’ ಚಿತ್ರದ ಫಸ್ಟ್ ಲುಕ್ ರಿವೀಲ್: ಗಂಗಾ ಪಾತ್ರದಲ್ಲಿ ಧನ್ಯ ಮಿಂಚಿಂಗ್
Advertisement
ರುದ್ರಾಕ್ಷಿ ಮಾಲೆಯನ್ನು ಸ್ವೀಕರಿಸಿದ ಪ್ರಧಾನಿ ಮೋದಿ ಅವರು, ‘ಈ ರುದ್ರಾಕ್ಷಿ ಮೂಲಕ ಮಾತಾಜಿ ಅವರ ಆಶೀರ್ವಾದ ನನಗೆ ಸಿಕ್ಕಂತಾಗಿದೆ. ಈ ದೇಶದ ಜನರು ಹೀಗೆ ನನ್ನ ರಕ್ಷಣೆಗೆ ನಿಂತಿದ್ದು ದೇಶಕ್ಕಾಗಿ ಮತ್ತಷ್ಟು ಕೆಲಸ ಮಾಡಲು ಹುಮ್ಮಸ್ಸು ತಂದಿದೆ’ ಎಂದಿದ್ದಾರೆ ಮೋದಿ.