ಸೌತ್ ಬ್ಯೂಟಿ ಪೂಜಾ ಹೆಗ್ಡೆ ಇಂಡಿಗೋ ವಿಮಾನ ಸಿಬ್ಬಂದಿಯ ವರ್ತನೆಯಿಂದ ಬೇಸತ್ತಿದ್ದಾರೆ. ಸಿಬ್ಬಂದಿಯ ವರ್ತನೆಗೆ ಟ್ವೀಟ್ ಮೂಲಕ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.
Advertisement
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಪೂಜಾ ಸದ್ಯ ವಿಜಯ್ ದೇವರಕೊಂಡ ನಟನೆಯ `ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಪೂಜಾ ವಿಮಾನ ಸಿಬ್ಬಂದಿಯ ವರ್ತನೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಪೂಜಾ ಅವರ ಪ್ರಯಾಣದ ವೇಳೆಯಲ್ಲಿ ಇಂಡಿಗೋ ವಿಮಾನದ ಸಿಬ್ಬಂದಿ ವಿಪುಲ್ ನಕಾಶೆ ಎಂಬುವವರು ಪೂಜಾ ಜತೆ ಅಸಭ್ಯ ವರ್ತನೆ ಮಾಡಿದ್ದು, ಈ ಕುರಿತು ಟ್ವೀಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?
Advertisement
Advertisement
ಇಂಡಿಗೋ ಸಿಬ್ಬಂದಿ ಇಂದು ವಿಮಾನದ ಒಳಗೆ ಕೆಟ್ಟದಾಗಿ ನಡೆದುಕೊಂಡರು. ಯಾವುದೇ ಕಾರಣವಿಲ್ಲದೇ ನಮ್ಮ ಬಳಿ ಕೆಟ್ಟದಾಗಿ ಮಾತನಾಡಿದ್ದರು. ಅವರ ಜೋರು ಧ್ವನಿ ಬೆದರಿಕೆ ಹಾಕುವಂತೆ ಇತ್ತು. ಸಾಮಾನ್ಯವಾಗಿ ಇಂತಹ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಆ ವ್ಯಕ್ತಿಯ ವರ್ತನೆ ನಿಜಕ್ಕೂ ಘಾಸಿಯಾಯಿತು ಎಂದು ಟ್ವೀಟ್ ಮೂಲಕ ತಮ್ಮ ನೋವನ್ನು ಪೂಜಾ ಹೇಳಿಕೊಂಡಿದ್ದಾರೆ.
Advertisement
Extremely sad with how rude @IndiGo6E staff member, by the name of Vipul Nakashe behaved with us today on our flight out from Mumbai.Absolutely arrogant, ignorant and threatening tone used with us for no reason.Normally I don’t tweet abt these issues, but this was truly appalling
— Pooja Hegde (@hegdepooja) June 9, 2022
ಸಿಬ್ಬಂದಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಯಾಣಿಕರನ್ನು ಹೇಗೆ ಮಾತನಾಡಿಸಬೇಕು ಅಂತಾ ನಿಮ್ಮ ಸಿಬ್ಬಂದಿಗೆ ತಿಳಿಸಿಕೊಡಿ ಅಂತಾ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.