Latest

ಗಗನಸಖಿ ಡ್ಯಾನ್ಸ್ ವೀಡಿಯೋ ವೈರಲ್

Published

on

Share this

ನವದೆಹಲಿ: ಇಂಡಿಗೋ ಗಗನ ಸಖಿ ಖಾಲಿ ಇರುವ ವಿಮಾನದಲ್ಲಿ ಡ್ಯಾನ್ಸ್ ಮಾಡಿದ ವೀಡಿಯೋವನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗಾಯಕ ಕಿಡಿಸ್ ‘ಟಚ್ ಇಟ್’ ಹಾಡಿಗೆ ಹೆಜ್ಜೆ ಹಾಕಿದ್ದು, ಆ ವೀಡಿಯೋವನ್ನು ಏವಿಯೇಷನ್ ಲೈಫ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಅದು ಅಲ್ಲದೇ ಈ ವೀಡಿಯೋವನ್ನು ಇದುವರೆಗೆ ಐದೂವರೆ ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು

ಈ ವೀಡಿಯೋದಲ್ಲಿ ಗಗನಸಖಿ ವೃಷ್ ಪಾಸ್ಟಲ್ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈ ವೀಡಿಯೋ ನೋಡಿದ ವೀಕ್ಷಕರು ‘ವಾವ್… ಸೂಪರ್’ ಎಂದು ಕಾಮೆಂಟ್ ಮಾಡಿದ್ದಾರೆ. ವೀಡಿಯೋ ಅಪ್ಲೋಡ್ ಮಾಡಿ 5 ದಿನವಾಗಿದ್ದು, ವೇಗವಾಗಿ ವೀಕ್ಷಕರನ್ನು ಮುಟ್ಟುತ್ತಿದೆ. ಇದನ್ನೂ ಓದಿ: 10 ಲಕ್ಷ ಮೌಲ್ಯದ ಪಂಚಲೋಹ, ಕಂಚಿನ ವಿಗ್ರಹ ಕಳ್ಳತನ – ಆರೋಪಿಗಳು ಅಂದರ್

 

View this post on Instagram

 

A post shared by Malaika Arora (@malaikaaroraofficial)

ಈ ಹಿಂದೆ ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ಆಕೆಯ ಸಹೋದರಿ ಕೂಡ ‘ಟಚ್ ಇಟ್’ ಸಾಂಗ್ ಗೆ ನೃತ್ಯ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications