ಪ್ಯಾರಿಸ್: ಭಾರತದಲ್ಲಿ ಗೋಧಿ ರಫ್ತು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಈ ಹಿನ್ನೆಲೆ ಭಾರತ ವಿಶ್ವಸಂಸ್ಥೆ(ಯುಎನ್)ಯಲ್ಲಿ ಮೊದಲ ಬಾರಿಗೆ ಗೋಧಿ ರಫ್ತು ನಿಷೇಧದ ಬಗ್ಗೆ ಮಾತನಾಡಿದೆ.
ಮೇ 13ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್‍ಟಿ) ಕಳೆದ ವಾರದ ಅಧಿಸೂಚನೆಯಲ್ಲಿ, ಭಾರತವು ಕೇಂದ್ರ ಸರ್ಕಾರ ನೀಡುವ ಅನುಮತಿಯ ಆಧಾರದ ಮೇಲೆ ಗೋಧಿ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ. ಈ ಹಿನ್ನೆಲೆ ಮೇ ತಿಂಗಳ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಜಾಗತಿಕ ಆಹಾರ ಭದ್ರತಾ ಕರೆ ಟು ಆಕ್ಷನ್’ ಕುರಿತು ಸಚಿವರ ಸಭೆ ನಡೆಯಿತು. ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ಮಾತನಾಡಿದರು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ
Advertisement
Delighted to participate in Ministerial Meeting at UN, chaired by H.E. @SecBlinken on "Global Food Security- Call to Action".
India will play its due role in advancing global food security, in which it will uphold equity, display compassion & promote social justice. https://t.co/rmkTGq21FK pic.twitter.com/MkAS45i0B0
— V. Muraleedharan (@MOS_MEA) May 18, 2022
Advertisement
ಪಾಶ್ಚಿಮಾತ್ಯ ದೇಶಗಳನ್ನು ಕರೆ ನೀಡಿದ ಭಾರತವು, ಕೋವಿಡ್-19 ಲಸಿಕೆಗಳ ವಿಷಯದಲ್ಲಿ ಭಾರತಕ್ಕೆ ದೊಡ್ಡಮಟ್ಟದಲ್ಲಿ ಖರ್ಚು ಆಗಿದೆ. ಇದನ್ನು ನಾವು ನೋಡಿದ್ದೇವೆ. ಗೋಧಿಯು ಕೋವಿಡ್-19 ಲಸಿಕೆಗಳ ದಾರಿಯಲ್ಲಿ ಹೋಗಬಾರದು. ಕೊರೊನಾ ಲಸಿಕೆಯಂತೆ ಗೋಧಿಯನ್ನು ರಫ್ತು ಮಾಡಲಾಗುವುದಿಲ್ಲ. ಏಕೆಂದರೆ ಯುಎನ್‍ನಲ್ಲಿ ಆಹಾರದ ಬೆಲೆಗಳಲ್ಲಿ ನ್ಯಾಯಸಮ್ಮತವಲ್ಲದೆ ಹೆಚ್ಚಳವಾಗುತ್ತಿದೆ. ಇದರಿಂದ ಆಹಾರ ಸಂಗ್ರಹಣೆಯಲ್ಲಿ ತಾರತಮ್ಯ ಉಂಟಾಗಬಹುದು ಎಂಬ ಬಗ್ಗೆ ಕಳವಳ ಉಂಟಾಗುತ್ತಿದೆ. ಆಹಾರ ಧಾನ್ಯಗಳ ವಿಷಯಕ್ಕೆ ಬಂದಾಗ ನಾವೆಲ್ಲರೂ ಪ್ರವೇಶದ ಪ್ರಾಮುಖ್ಯತೆಯನ್ನು ಸಮರ್ಪಕವಾಗಿ ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
Advertisement
????Watch: Minister of State for External Affairs, Mr. V. Muraleedharan @MOS_MEA delivers #India's national statement at the Ministerial Meeting on Global Food Security Call to Action ⤵️@MEAIndia @VMBJP pic.twitter.com/Wu23OR39UG
— India at UN, NY (@IndiaUNNewYork) May 18, 2022
Advertisement
ಕಡಿಮೆ ಆದಾಯ ಹೊಂದಿದ ದೇಶಗಳು ಇಂದು ಹೆಚ್ಚುತ್ತಿರುವ ವೆಚ್ಚ ಮತ್ತು ಆಹಾರ ಧಾನ್ಯಗಳ ತೊಂದರೆಗಳಿಂದ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಸಾಕಷ್ಟು ದಾಸ್ತಾನುಗಳನ್ನು ಹೊಂದಿರುವ ಭಾರತದಂತಹ ದೇಶಗಳು ಸಹ ಆಹಾರದ ಬೆಲೆಗಳಲ್ಲಿ ಅಸಮರ್ಥನೀಯ ಹೆಚ್ಚಳವನ್ನು ಕಂಡಿವೆ. ಈ ನಿರ್ಧಾರವು ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇದು ಕಳೆದ ಒಂದು ವರ್ಷದಲ್ಲಿ ಸರಾಸರಿ 14-20 ಶೇಕಡಾ ಏರಿಕೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್