ನವದೆಹಲಿ: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಸಂಘರ್ಷದಿಂದ ಉಂಟಾಗಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಎರಡೂ ದೇಶಗಳಿಗೆ ಪ್ರಯಾಣಿಸದಂತೆ ಕೇಂದ್ರ ಸರ್ಕಾರ ನಾಗರಿಕರಿಗೆ ಸಲಹೆ ನೀಡಿದೆ.
ಸಿರಿಯಾದಲ್ಲಿರುವ ತನ್ನ ರಾಯಭಾರಿ ಕಚೇರಿಯ ಮೇಲೆ ಶಂಕಿತ ಇಸ್ರೇಲಿ ವೈಮಾನಿಕ ದಾಳಿಗೆ (Airstrike) ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‍ನ ಬೆದರಿಕೆ ಬಂದ ನಂತರ ವಿದೇಶಾಂಗ ಸಚಿವಾಲಯ (Foreign Ministry) ಈ ಸಲಹೆ ನೀಡಿದೆ. ಉಭಯ ದೇಶಗಳಲ್ಲಿನ ತಮ್ಮ ದೇಶದ ನಾಗರಿಕರು ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಾತ್ರಿ 10 ಗಂಟೆ ನಂತರವೂ ಪ್ರಚಾರ – ಅಣ್ಣಾಮಲೈ ವಿರುದ್ಧ ದೂರು ದಾಖಲು
Advertisement
ಅಮೆರಿಕ ಮತ್ತು ರಷ್ಯಾ ಸೇರಿದಂತೆ ಇತರೆ ದೇಶಗಳು ತಮ್ಮ ಸಿಬ್ಬಂದಿ ಮತ್ತು ನಾಗರಿಕರಿಗೆ ಇದೇ ರೀತಿಯ ಸಲಹೆಗಳನ್ನು ನೀಡಿವೆ.
Advertisement
Advertisement
ಇರಾನ್‍ನ ಪ್ರತೀಕಾರ, ಗಾಜಾದಲ್ಲಿ ಇರಾನ್ ಬೆಂಬಲಿತ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಿನ ಯುದ್ಧದಂತೆ ಮರುಕಳಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
Advertisement
ಸಂಘರ್ಷವನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕ, ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಇರಾಕ್‍ನ ವಿದೇಶಾಂಗ ಮಂತ್ರಿಗಳಿಗೆ ಮಾತುಕತೆ ನಡೆಸಿದೆ. ಇರಾನ್‍ಗೆ ಇಸ್ರೇಲ್‍ನೊಂದಿಗಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುವಂತೆ ಕೇಳಿಕೊಳ್ಳಲಾಗಿದೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್ ಬಾಂಬ್ ಸ್ಫೋಟದ ಸೂತ್ರಧಾರ!