ನಟಿ ಇಲಿಯಾನಾ ಡಿಕ್ರೂಸ್ ಬೇಬಿ ಬಂಪ್ ಫೋಟೋಶೂಟ್

Public TV
1 Min Read
ileana 1 2

ಬಾಲಿವುಡ್ (Bollywood) ನಟಿ ಇಲಿಯಾನಾ ಡಿಕ್ರೂಸ್ (Ileana D’cruze) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ತಿಳಿಸಿದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಇದುವೆಗೂ ರಿವೀಲ್ ಮಾಡಿಲ್ಲ. ಅವರು ಆಗಾಗ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ನಟಿ ತಾಯಿ ಆಗುತ್ತಿರುವ ಅವರು ಬಹಳ ಖುಷಿಯಲ್ಲಿದ್ದಾರೆ.

ileana 1 1

ಇಲಿಯಾನಾ ಮದುವೆ ಆಗದೇ ಮಗು ಪಡೆಯುತ್ತಿರುವ ಇಲಿಯಾನಾ ಡಿಕ್ರೂಸ್ ಅವರ ನಿರ್ಧಾರಕ್ಕೆ ಅವರ ಕುಟುಂಬದವರ ಒಪ್ಪಿಗೆ ಕೂಡ ಇದೆ. ಈಗ ಇಲಿಯಾನಾ ಅವರು ಸಾಮಾಜಿಕ ಹೊಸ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ನಟಿಯ ಫೋಟೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಇಲಿಯಾನಾ ಡಿಕ್ರೂಸ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸದ್ಯ ಅವರು ಪ್ರೆಗ್ನೆನ್ಸಿ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

ileana 1

ಏಪ್ರಿಲ್ 18ರಂದು ನಟಿ ಇಲಿಯಾನಾ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಅಂದಿನಿಂದ ನಟಿಗೆ ಮಗುವಿನ ತಂದೆ ಯಾರು ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ಈಗಲೂ ಅದೇ ಪ್ರಶ್ನೆ ಎದುರಾಗಿದೆ. ಸದ್ಯ ನಟಿ ಮಿರರ್ ಸೆಲ್ಫಿಯ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

ileana

ನಟಿ ಇಲಿಯಾನಾ ಕತ್ರಿನಾ ಕೈಫ್ ಸಹೋದರ ಜೊತೆ ಡೇಟಿಂಗ್ ಮಾಡ್ತಿರುವ ಬಗ್ಗೆ ಈ ಹಿಂದೆ ವರದಿ ಮಾಡಲಾಗಿತ್ತು. ಸೆಬಾಸ್ಟಿಯನ್ ಲೊರಾನ್ ಜೊತೆ ಎಂಗೇಜ್ ಆಗಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಇದೀಗ ಇಲಿಯಾನಾ ಪ್ರೆಗ್ನೆಂಟ್ ಆಗಿರುವ ಬೆನ್ನಲ್ಲೇ ನಟಿಯ ಡೇಟಿಂಗ್ ವಿಚಾರ ಮುನ್ನೆಲೆಗೆ ಬರುತ್ತಿದೆ.

Share This Article