Cricket

ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ

Published

on

Share this

ಜಮೈಕಾ: ಯುಎಇ ಮತ್ತು ಓಮನ್‍ನಲ್ಲಿ ಅಕ್ಟೋಬರ್-ನವೆಂಬರ್‍ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನಕ್ಕೆ ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಕಾರ್ಲೋಸ್ ಬ್ರಾಥ್‍ವೈಟ್ ಚಾಲನೆ ನೀಡಿದ್ದಾರೆ.

ಪ್ರತಿವರ್ಷ ವಿಶ್ವಕಪ್‍ಗೂ ಮುನ್ನ ಟ್ರೋಫಿಯನ್ನು ವಿಶ್ವದಾದ್ಯಂತ ಪ್ರದರ್ಶನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಟ್ರೋಫಿಗೆ ವಿಶ್ವ ಪ್ರವಾಸ ಸಾಧ್ಯವಾಗುತ್ತಿಲ್ಲ. ಇದರ ಬದಲಾಗಿ ಆನ್‍ಲೈನ್ ವಿಶ್ವಪ್ರದರ್ಶನವನ್ನು ಐಸಿಸಿ ಹಮ್ಮಿಕೊಂಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

ಈ ಬಾರಿಯ ವಚ್ರ್ಯುವಲ್ ಯಾತ್ರಾ ಕಾರ್ಯಕ್ರಮಕ್ಕೆ ಬ್ರಾಥ್‍ವೈಟ್ ಚಾಲನೆ ನೀಡಿದರು. ಬ್ರಾಥ್‍ವೈಟ್ 2016ರಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ವೆಸ್ಟ್ ಇಂಡೀಸ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಹಾಗಾಗಿ ಈ ಬಾರಿ ಅವರ ಮೂಲಕ ಆನ್‍ಲೈನ್ ಯಾತ್ರೆಗೆ ಚಾಲನೆ ಕೊಡಿಸಲಾಯಿತು. ಈ ಸಂದರ್ಭ ಮಾತನಾಡಿದ ಬ್ರಾಥ್‍ವೈಟ್, ಈ ಟ್ರೋಫಿಯೊಂದಿಗೆ ನನಗೆ ಹಲವು ನೆನಪುಗಳು ಉಳಿದಿದುಕೊಂಡಿದೆ. ನನ್ನ ಕ್ರಿಕೆಟ್ ಬದುಕಿನ ಮಹಾಸಂಭ್ರಮದ ಕ್ಷಣ ಈ ಟ್ರೋಫಿಯಲ್ಲಿ ಕಾಣಸಿಕ್ಕಿದೆ. ಈ ಟ್ರೋಫಿಯ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.

ಐಸಿಸಿಯು ಆಯೋಜನೆ ಮಾಡಿರುವ ಆನ್‍ಲೈನ್ ಟ್ರೋಫಿಯ ವಿಶ್ವದರ್ಶನದಲ್ಲಿ ವಿಶ್ವದ ಪ್ರತಿಯೊಂದು ದೇಶಕ್ಕೆ ಸಾಗುವ ಅವಕಾಶ ಕೂಡಿ ಬರಲಿ ಎಂದು ಐಸಿಸಿ ಶುಭಕೋರಿದೆ. ಈ ಟ್ರೋಫಿಯು ತ್ರೀಡಿ ಮೂಲಕ ವಚ್ರ್ಯುವಲ್ ಯಾತ್ರೆ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗಲಿದೆ. ಇದನ್ನೂ ಓದಿ: ಸಚಿನ್, ಗಂಗೂಲಿ 2007ರ ಟಿ20 ವಿಶ್ವಕಪ್ ಆಡದಂತೆ ಒಪ್ಪಿಸಿದ್ದು ದ್ರಾವಿಡ್: ಟೀಂ ಇಂಡಿಯಾ ಮಾಜಿ ಕೋಚ್

2021ರ ಟಿ20 ವಿಶ್ವಕಪ್ ಈ ಬಾರಿ ಭಾರತದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದಾಗಿ ಟೂರ್ನಿಯನ್ನು ಯುಎಇ ಮತ್ತು ಓಮನ್‍ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಸಲು ಐಸಿಸಿ ನಿರ್ಧರಿಸಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications