ಕೆಲ ತಿಂಗಳುಗಳಿಂದ ಮಾನ್ವಿತಾ ಹರೀಶ್ ಸಿನಿಮಾ ರಂಗದಿಂದ ದೂರವಿದ್ದರು. ಟಗರು ಪುಟ್ಟಿಗೆ ಯಾವುದೇ ಸಿನಿಮಾಗಳು ಸಿಗುತ್ತಿಲ್ಲವಾ ಎನ್ನುವ ಅನುಮಾನ ಕೂಡ ಮೂಡಿತ್ತು. ಅದಕ್ಕೆ ಪೂರಕ ಎನ್ನುವಂತೆ ಮಾನ್ವಿತಾ ಹರೀಶ್ ಕೂಡ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಯಾಕೆ ಅವರು ಸಿನಿಮಾ ರಂಗದಿಂದ ಛೋಟಾ ಬ್ರೇಕ್ ತಗೆದುಕೊಂಡಿದ್ದರು ಎನ್ನುವುದಕ್ಕೆ ಕಾರಣ ಸಿಕ್ಕಿತೆ. ಆ ಕಾರಣವನ್ನೂ ಅವರೇ ಹೇಳಿಕೊಂಡಿದ್ದಾರೆ.
ಮಾನ್ವಿತಾ ಎಜ್ಯುಕೇಷನ್ ಕಂಪ್ಲೀಟ್ ಮಾಡಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತಂತೆ. ಹಾಗಾಗಿ ಅವರು ಕೆಲ ತಿಂಗಳು ಸಿನಿಮಾ ರಂಗದಿಂದ ದೂರ ಇದ್ದರಂತೆ. ಹಾಗಾಗಿ ಬ್ಯಾಲೆನ್ಸ್ ಮಾಡಿಕೊಂಡು ಸಿನಿಮಾಗಳ ಜೊತೆಗೆ ವಿದ್ಯಾಭ್ಯಾಸವನ್ನೂ ಅವರು ಮುಂದುವರೆಸಿದ್ದಾರಂತೆ. ಈ ಬಗ್ಗೆ ಮಾನ್ವಿತಾ ಪೋಸ್ಟ್ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ
ಮಾನ್ವಿತಾ ಸ್ನಾತಕೋತ್ತರ ಪದವಿಯನ್ನು ಪಡೆಯಬೇಕು ಎನ್ನುವುದು ಅವರ ತಾಯಿಯ ಕನಸಾಗಿತ್ತಂತೆ. ಹಾಗಾಗಿ ಅವರು ಮಾಸ್ ಕಮ್ಯೂನಿಕೇಷನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರಂತೆ. ಅದೂ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರಂತೆ. ಈ ಕಾರಣಕ್ಕಾಗಿಯೇ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಅಂದಿದ್ದಾರೆ. ಇನ್ಮುಂದೆ ಹಲವು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.