ಬೆಂಗಳೂರು: ನನಗೆ ಸಿಎಂ ಆಯ್ಕೆ ಮಾಡೋದು, ಕೆಳಗೆ ಇಳಿಸೋದು ಬಹಳ ಚೆನ್ನಾಗಿ ಗೊತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ (B.K.Hariprasad) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬೆಂಗಳೂರಿನ (Bengaluru) ಖಾಸಗಿ ಹೊಟೇಲ್‌ನಲ್ಲಿ ನಡೆದ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಸಿದ್ದರಾಮಯ್ಯ ವಿರುದ್ಧ ಸಮುದಾಯದ ಅಸ್ತ್ರ ಪ್ರಯೋಗ ಮಾಡಿದ ಅವರು, ಕರ್ನಾಟಕದಲ್ಲಿ ರಾಜಕೀಯವಾಗಿ ಈ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದರೂ ಆಗುತ್ತಿಲ್ಲ. ಅವಕಾಶ ವಂಚಿತರಾಗುತ್ತಿರುವುದನ್ನು ನೋಡಿದರೆ ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಂದೂ, ಸಿದ್ದರಾಮಯ್ಯದೂ ಫೋಟೋ ಜೊತೆಲೇ ಬರೋ ಹಾಗೆ ಮಾಡ್ರಯ್ಯ: ಡಿಸಿಎಂ
Advertisement
Advertisement
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರ ಒಟ್ಟಿಗೆ ಸೇರಬೇಕು ಎಂದು ನಾವು 2013ರಲ್ಲಿ ಬೆಂಬಲ ಕೊಟ್ಟಿದ್ದೆವು. ಬೆಂಬಲ ಕೊಟ್ಟ ಬಳಿಕ ನಾವು ಕಾಂಗ್ರೆಸ್ (Congress) ಆಗಲಿ, ಬಿಜೆಪಿ (BJP) ಬಿಟ್ಟು ಬಿಡಿ, ಸಿಎಂ, ಮಂತ್ರಿಗಳಾಗಲಿ ಯಾರ ಬಳಿಯೂ ಕೈಚಾಚುವುದಿಲ್ಲ. ಹಿಂದುಳಿದ ವರ್ಗಕ್ಕೆ ಯಾವ ರೀತಿ ಅನುಕೂಲ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ. ಸ್ವಾರ್ಥಕ್ಕೆ ಯಾವುದೂ ಕೇಳಲ್ಲ ಎಂದರು. ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ- ರಸ್ತೆಗಳು ಜಲಮಯ, ಸಂಚಾರ ಅಯೋಮಯ
Advertisement
ಉಡುಪಿ (Udupi) ಜಿಲ್ಲೆಯ ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್‌ಗೆ 5 ಕೋಟಿ ರೂ. ಕೊಡಿ ಎಂದು ಕೇಳಿದ್ದೆವು. ಸಿದ್ದರಾಮಯ್ಯ ಕೊಡುತ್ತೇವೆ ಎಂದು ಕೊಟ್ಟಿಲ್ಲ. ನನಗೆ ಅವರು ರಾಜಕೀಯವಾಗಿ ಏನೂ ಸಹಾಯ ಮಾಡಲು ಆಗಲ್ಲ. ನಾನೇ ಅವರಿಗೆ ಸಹಾಯ ಮಾಡುತ್ತೇನೆ. ಮಂಗಳೂರು (Mangaluru) ವಿವಿಯಲ್ಲಿ ಗುರುಪೀಠ ಸ್ಥಾಪನೆಗೆ ನಾನು ಎಂಪಿ ಆಗಿದ್ದಾಗ ಹಣ ಕೊಟ್ಟಿದ್ದೆ. ಕಟ್ಟಡ ಅರ್ಧಕ್ಕೆ ನಿಂತಿದೆ. ಹಣ ಕೊಟ್ಟಿಲ್ಲ. ಆದರೆ ಅವರ ಸಮಾಜಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಸ್ವಾಮೀಜಿಗಳು ನೋಡಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಜರಂಗದಳದ ಮೂವರಿಗೆ ಗಡಿಪಾರು ನೋಟಿಸ್- ಸಿಡಿದೆದ್ದ ಹಿಂದೂ ಸಂಘಟನೆಗಳು
Advertisement
ಹಿಂದುಳಿದ ವರ್ಗ ಎಂದರೆ ಒಂದು ಜಾತಿ ಮಾತ್ರವಲ್ಲ. ಜಾತಿ ಬೇರೆ, ವರ್ಗ ಬೇರೆ. ನಾವು ವರ್ಗದಲ್ಲಿ ಬರುತ್ತೇವೆ. ವರ್ಗದಲ್ಲಿ ಬರುವ ಎಲ್ಲರಿಗೂ ಸಮಾನ ಹಕ್ಕು ಪಡೆಯಬೇಕು. 11 ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ, ದೀವರು ನಿರ್ಣಾಯಕವಾಗಿದ್ದೇವೆ. ನಾನು ಸಹ ಎಲೆಕ್ಷನ್ ಕಮಿಟಿಯಲ್ಲಿ ಇದ್ದೆ. ನಾಲ್ಕು ಜನ ಟಿಕೆಟ್ ವಂಚಿತರಾದರು. 2 ಬಿಲ್ಲವ, 1 ಈಡಿಗ ಹಾಗೂ ಒಬ್ಬರು ದೀವರು ವಂಚಿತರಾದರು ಎಂದು ಹರಿಹಾಯ್ದರು. ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕೆ ಸಚಿವ ರಾಜೇಂದ್ರ ಗುಧಾ ವಜಾ
ಮಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳು ಅಲ್ಲ. ನೀವು ಮುಂದೆ ಬರಬೇಕಾದರೆ ಅಲ್ಪಸಂಖ್ಯಾತರ ವಿರುದ್ಧ ಧ್ವನಿ ಎತ್ತಬಾರದು. ಅಲ್ಪಸಂಖ್ಯಾತರನ್ನು ಮುಂದಿಟ್ಟು ನಮಗೆ ಟಿಕೆಟ್ ವಂಚಿತರನ್ನಾಗಿ ಮಾಡುತ್ತಾರೆ. ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಕುರುಬರು ಸಿಎಂ ಸ್ಥಾನಕ್ಕೆ ಹೋರಾಟ ಮಾಡ್ತಾರೆ. ಅವರು ಅಧಿಕಾರಕ್ಕೆ ಬರಬೇಕಾದರೆ ಅವರ ಸ್ಥಾನಗಳನ್ನು ಬಿಟ್ಟುಕೊಡಲಿ. ನಮ್ಮನ್ನು ಯಾಕೆ ಕಟ್ ಮಾಡ್ತಾರೆ? ನಾವು ಹೆಚ್ಚು ಇರುವ ಜಾಗದಲ್ಲಿ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಎರಡು ಪ್ರಮುಖ ಮಸೀದಿಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್
ನಾವೇನು ಮಂಡ್ಯ, ಬೆಳಗಾವಿಯಲ್ಲಿ ಕೊಡಿ ಎಂದು ಕೇಳಲ್ಲ. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಕಡೆ ನಮ್ಮವರು ನಿರ್ಣಾಯಕ. ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ನಾನು ಎಂಪಿ ಇದ್ದಾಗ ಈಡಿಗ ಸಮುದಾಯ ಭವನಕ್ಕೆ, ಶಾಲೆ, ವಸತಿ ಶಾಲೆಗೆ ಹಣ ಕೊಟ್ಟಿದ್ದೇನೆ. ನಾರಾಯಣಗುರು ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಅದಕ್ಕೆ ಹಣ ಕೊಟ್ಟಿಲ್ಲ. ನಾವು ಒತ್ತಡ ತಂದಿದ್ದೇವೆ. ಇದು ನಮಗೆ ಒಳ್ಳೆಯದಾಗುವ ಪ್ರಶ್ನೆಯಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು. ನಮ್ಮ ಪೀಳಿಗೆ ನೂರು ವರ್ಷಗಳ ಹಿಂದೆ ಹೋಗಿದೆ. ಈಗಾಗಲೇ ಒಬ್ಬರು ಆಗಿದ್ದಾರಲ್ಲ, ಇನ್ನೊಬ್ಬರು ಯಾಕೆ ಅಂತ ಕೆಲವರು ಸ್ವಾಮೀಜಿಗಳ ಬಳಿ ಹೇಳ್ತಾರೆ. ಮಂಗಳೂರಿನಲ್ಲಿ 600 ಜನ ಜೈಲಿಗೆ ಹೋದರು, ಅವರ ಪೈಕಿ 400 ಜನ ಬಿಲ್ಲವರು. ಯಾಕೆ ಜೈಲಿಗೆ ಕಳಿಸಿದ್ರಂತೆ? ಯಾರದ್ದೋ ತೆವಲಿಗೆ ಕೊಲೆ ಮಾಡೋದು, ಕೊಲೆ ಆಗೋದು. ನಾರಾಯಣಗುರು ಸಿದ್ಧಾಂತ ನಾವು ಮರೆತಿದ್ದೇವೆ ಎಂದು ಬೇಸರಗೊಂಡರು. ಇದನ್ನೂ ಓದಿ: ಪ.ಬಂಗಾಳದಲ್ಲಿಯೂ ನಡೆದಿತ್ತು ಮಹಿಳೆಯರಿಬ್ಬರ ಅರೆಬೆತ್ತಲೆ ಮೆರವಣಿಗೆ- ವೀಡಿಯೋ ವೈರಲ್
ನಾವು ಸಂಘಟಿತರಾಬೇಕು. ಇಲ್ಲ ಅಂದರೆ ಕಡೆಗಣಿಸುತ್ತಾರೆ. ಹಿಂದೆ ಜಾಲಪ್ಪ ಅವರಿಂದ ಎಲ್ಲಾ ಸಹಾಯ ಪಡೆದುಕೊಂಡರು. ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಾದರೆ, ಜಾಲಪ್ಪ ಅವರ ಮೊಮ್ಮಗನೆ ಅಲ್ಲ ಎನ್ನುವ ಮಟ್ಟಕ್ಕೆ ಚರ್ಚೆ ಮಾಡಿದ್ರು. 1985 ರವರೆಗೆ ಅಬಕಾರಿ ಗುತ್ತಿಗೆದಾರರು ಸರ್ಕಾರ ಮಾಡುತ್ತಿದ್ದರು. 2008ರಲ್ಲಿ ಯಡಿಯೂರಪ್ಪ ಅವರು ಸಾರಾಯಿ ಬ್ಯಾನ್ ಮಾಡಿದರು. ಬೇರೆ ಜಾತಿಯ ಕಸುಬಿಗೆ ಕೈ ಹಾಕಿದ್ದರೇ ಇಷ್ಟೊತ್ತಿಗೆ ರಕ್ತಪಾತ ಆಗಿರುತ್ತಿತ್ತು. ನಾವು ಸುಮ್ಮನೆ ಪಾನಿಪುರಿ, ತರಕಾರಿ ಮಾರಾಟ ಮಾಡುತ್ತಿದ್ದೇವೆ. ಬಿಜೆಪಿಯವರು ಇದ್ದರೆ ತಪ್ಪು ತಿಳಿಯಬೇಡಿ. ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ಬಹಳ ವ್ಯವಸ್ಥೆಗಾಗಿ ತುಳಿಯುವ ಪ್ರಯತ್ನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಲಬುರಗಿಯಲ್ಲಿ ಮುಂದಿನ ಒಂದು ವಾರ ಮಳೆ – ನದಿತೀರದಲ್ಲಿ ಹೈಅಲರ್ಟ್ ಘೋಷಣೆ
ನಾನು ಮಂತ್ರಿ ಆಗೋದು ಬಿಡೋದು ಬೇರೆ ಪ್ರಶ್ನೆ. 5 ಮಂದಿ ಸಿಎಂ ಆಯ್ಕೆ ಮಾಡುವುದರಲ್ಲಿ ನಾನು ಪಾತ್ರವಹಿಸಿದ್ದೇನೆ. ಛತ್ತೀಸ್‌ಗಢದ ಸಿಎಂ ನಮ್ಮ ನೆಂಟರು ಅಲ್ಲ. ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ಸಿಎಂ ಮಾಡೋದು, ಕೆಳಗೆ ಇಳಿಸೋದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷ ರಾಜಕಾರಣ ಮಾಡಲು ಆಗುತ್ತಿರಲಿಲ್ಲ, ಓಡಿಸಿ ಬಿಡುತ್ತಿದ್ದರು ಎಂದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು
Web Stories