Connect with us

Bengaluru City

ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

Published

on

ಬೆಂಗಳೂರು: ಮಾಧ್ಯಮದ ಮೂಲಕ ಪತ್ರಕರ್ತ ರವಿ ಬೆಳಗೆಯವರ ಪತ್ನಿ ಯಶೋಮತಿ ಅವರ ಫೇಸ್‍ಬುಕ್ ಸ್ಟೇಟಸ್ ನ್ನು ಗಮನಿಸಿದ್ದೇನೆ. ಸುನಿಲ್ ವಿರುದ್ಧದ ಹೇಳಿಕೆ ಅಂತ ನನಗನ್ನಿಸಿಲ್ಲ. ಆದ್ರೆ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ ಅಂತ ಸುನಿಲ್ ಹೆಗ್ಗರವಳ್ಳಿ ಪ್ರತಿಕ್ರಿಯಿಸಿದ್ದಾರೆ.

ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಕರೆದಿರುವ ಹಿನ್ನೆಲೆಯಲ್ಲಿ ಇಂದು ಸುನಿಲ್ ಹೆಗ್ಗರವಳ್ಳಿ ಕಮಿಷನರ್ ಕಚೇರಿಗೆ ಬಂದಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶೋಮತಿಯವರ ಸ್ಟೇಟಸ್ ನ ಮೊದಲನೇ ಲೈನ್ ನಲ್ಲಿ ನನ್ನ ಮಗ ಎರಡು ದಿನದಿಂದ ಶಾಲೆಗೆ ಹೋಗಲಿಲ್ಲ. ಊಟ ಮಾಡಲೆಂದು ಅನ್ನ ಹಾಕ್ಕೊಂಡ್ರೆ ರವಿ ಕಣ್ಣೆದುರಿಗೆ ಬರುತ್ತಾರೆ ಅಂತೆಲ್ಲಾ ಬರೆದಿದ್ದಾರೆ. ಹಾಗೆಯೇ ನನಗೂ ಕುಟುಂಬ ಇದೆ. ನನಗೂ 80 ವರ್ಷದ ತಂದೆ, 75 ವರ್ಷದ ತಾಯಿಯಿದ್ದಾರೆ. 8 ವರ್ಷದ ಮಗ ಇದ್ದಾನೆ. ಒಂದು ವೇಳೆ ನನಗೇನಾದ್ರೂ ಹೆಚ್ಚು ಕಡಿಮೆ ಆಗಿದ್ರೆ ಅಥವಾ ನನ್ನ ಕೊಲೆಯೇ ಆಗಿದ್ರೆ ಇಂದು ನನ್ನ ತಂದೆ-ತಾಯಿ, ಹೆಂಡ್ತಿ-ಮಗನ ಸ್ಥಿತಿ ಹೇಗಿರುತ್ತಿತ್ತು ಎಂದು ಪ್ರಶ್ನಿಸಿದ ಅವರು, ಇಂದು ಅದೃಷ್ಟವಶಾತ್ ನಾನು ಬದುಕಿದ್ದೀನಿ. ಹೀಗಾಗಿ ಅವರು ಅತ್ಯಂತ ಸುಲಭವಾಗಿ ಈ ಮಾತುಗಳನ್ನು ಹೇಳಬಹುದು ಅಂತ ಹೇಳಿದ್ರು. ಇದನ್ನೂ ಓದಿ: ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ

ಬಳಿಕ ಹೇಡಿತರ ರಕ್ಷಣೆ ಕೇಳಿದ್ದಾನೆ ಅಂತ ಹೇಳಿದ್ದಾರೆ. ಹೇಡಿ ಅನ್ನೋದಕ್ಕಿಂತ ನನಗೂ ಒಂದು ಜವಾಬ್ದಾರಿ ಇದೆ. ಯಾರು ಹೇಡಿ ಅನ್ನೋದು ಈಗಾಗ್ಲೇ ಎಲ್ಲರಿಗೂ ತಿಳಿದಿದೆ. ನನಗೆ ನನ್ನ ತಂದೆ-ತಾಯಿ, ಪತ್ನಿ ಮಗ ಇವರೆಲ್ಲರ ಜವಾಬ್ದಾರಿ ಇದ್ದಾಗ, ನಾನು ರವಿ ಬೆಳಗೆರೆ ಎದುರಿಗೆ ಎದೆ ಬಿಚ್ಚಿ ರಿವಾಲ್ವರ್ ಕೊಟ್ಟು ಗುಂಡು ಹೊಡಿರಿ ಅಂತ ಕೇಳಕ್ಕಾಗಲ್ಲ. ಹೀಗಾಗಿ ಒಂದು ಪ್ರಕರಣ ನಡೆದಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಅದೇ ರೀತಿ ನಾನು ನಡೆದುಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ. ಹಾಗೆಯೇ ಅವರ ಸಲಹೆ ನನಗೆ ಬೇಕಾಗಿಲ್ಲ. ಅವರ ವಿಷಯ ಏನ್ ಬೇಕಾದ್ರೂ ಮಾತನಾಡಿಕೊಳ್ಳಲಿ. ಆದ್ರೆ ನನ್ನ ಹಾಗೂ ನನ್ನ ಕುಟುಂಬದ ವಿಷಯಕ್ಕೆ ಅವರು ಬರುವುದು ಬೇಡ ಅಂತ ಸುನಿಲ್ ಹೆಗ್ಗರವಳ್ಳಿ ಎಚ್ಚರಿಕೆ ನೀಡಿದ್ದಾರೆ.

ಭದ್ರತೆಗೆ ಕೋರಿಕೆ: ನನಗೆ ಭದ್ರತೆ ಬೇಕು. ಹೀಗಾಗಿ ಈಗಾಗಲೆ ಸಿಎಂ, ಗೃಹಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಕೂಡ ಭದ್ರತೆ ಕೊಡಿಸುವುದಾಗಿ ಹೇಳಿದ್ರು. ಇಂಟಲಿಜೆನ್ಸ್ ಕರೆ ಮಾಡಿ ಸ್ಟೇಟ್ ಸ್ ಚೆಕ್ ಮಾಡಿದ್ರು. ನನಗೆ ಗನ್ ಮ್ಯಾನ್ ಬೇಕು ಅಂತ ಹೇಳಿದ್ದೀನಿ ವಿಚಾರ ಮಾಡಿ ನಮಗೆ ವ್ಯವಸ್ಥೆ ಮಾಡ್ತಾರೆ. ರವಿ ಬೆಳಗೆರೆ ಪ್ರಭಾವಿ ವ್ಯಕ್ತಿ ಹೀಗಾಗಿ ಭದ್ರತೆಗೆ ಕೋರಿದ್ದೆನೆ. ಆದ್ರೆ ಗನ್ ಮ್ಯಾನ್ ಕೊಡ್ತಾರೋ ಏನೋ ಸರ್ಕಾರಕ್ಕೆ ಬಿಟ್ಟ ವಿಚಾರ ಅಂತ ಸುನಿಲ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *