ಬೆಂಗಳೂರು: ನಾಯಿ ಕಟ್ಟಿಹಾಕುವ ಬೆಲ್ಟ್‌ನಿಂದ (Dog Belt) 4 ತಿಂಗಳ ಗರ್ಭಿಣಿ ಪತ್ನಿಯನ್ನು (Pregnant Wife) ಕೊಂದು ಬಳಿಕ ಪತಿಯೂ (Husband) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಕೆ ಅಚ್ಚುಕಟ್ಟಿನಲ್ಲಿ (CK Achukattu) ನಡೆದಿದೆ.
ಸ್ವಪ್ನ ಗಂಡನಿಂದ ಕೊಲೆಯಾದ ಪತ್ನಿ. ಮನೋಜ್ ತನ್ನ ಪತ್ನಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿ ಮೂಲತಃ ಉತ್ತರ ಪ್ರದೇಶ ಮೂಲದವರಾಗಿದ್ದು, ಮನೋಜ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ಮಳೆ ಜಾಸ್ತಿ ಆದ್ರೂ, ಕಡಿಮೆ ಆದ್ರೂ ಮೋದಿನೇ ಕಾರಣ – ಇದು ಕಾಂಗ್ರೆಸ್ ನೀತಿ: ಜೋಶಿ ಕಿಡಿ
4 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಸ್ವಪ್ನಾಳನ್ನು ನಾಯಿ ಕಟ್ಟಿಹಾಕುವ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ ಮನೋಜ್ ಬಳಿಕ ಅದೇ ಬೆಲ್ಟ್‌ನಿಂದ ನೇಣಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಸಿಕೆ ಅಚ್ಚುಕಟ್ಟು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿವಾದಗಳ ನಡುವೆಯೇ ಕಂಬಳಕ್ಕೆ ಸರ್ಕಾರದಿಂದ ಗುಡ್ ನ್ಯೂಸ್
