ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿಎಂ ಸೂರ್ಯಘರ್; ಮಫ್ತ್ ಬಿಜ್ಲಿ ಯೋಜನೆ’ (PM Surya Ghar: Muft Bijli Yojana) ದೇಶಾದ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿದ್ದು, ಇದುವರೆಗೆ 48.02 ಲಕ್ಷಕ್ಕೂ ಅಧಿಕ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
2024ರ ಫೆಬ್ರವರಿಯಲ್ಲಿ ಆರಂಭವಾದ ಈ ಯೋಜನೆಯಡಿ ಈಗಾಗಲೇ 39.72 ಲಕ್ಷಕ್ಕೂ ಹೆಚ್ಚು ಸೌರ ಮೇಲ್ಚಾವಣಿ (ರೂಫ್‌ಟಾಪ್ ಸೋಲಾರ್) ವ್ಯವಸ್ಥೆಗಳು ಅಳವಡಿಕೆಯಾಗಿದ್ದು, ಗ್ರಾಮೀಣ ಪ್ರದೇಶಗಳ ಮನೆಗಳಿಗೂ ಯೋಜನೆ ವಿಸ್ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ಮಸೂದೆ ಅಂಗೀಕಾರ
ಯೋಜನೆಯ ಮಹತ್ವದ ಸಾಧನೆಯೆಂದರೆ, 18.93 ಲಕ್ಷಕ್ಕೂ ಅಧಿಕ ಫಲಾನುಭವಿಗಳು ವಿದ್ಯುತ್ ಬಳಕೆ ಹಾಗೂ ಸ್ವಯಂ ಉತ್ಪಾದನೆಯ ಆಧಾರದ ಮೇಲೆ ಶೂನ್ಯ ವಿದ್ಯುತ್ ಬಿಲ್ ಪಡೆದಿದ್ದಾರೆ ಎಂದು ಡಿಸ್ಕಾಂಗಳ ವರದಿ ಉಲ್ಲೇಖಿಸಿ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ವಕ್ಷೇತ್ರದಲ್ಲಿ ಬರ ಪರಿಶೀಲನೆ ನಡೆಸಿದ ಬಿಜೆಪಿ ನಿಯೋಗ – ಶೀಘ್ರ ಬರ ಪರಿಹಾರ ಘೋಷಣೆಗೆ ಒತ್ತಾಯ
2025-26ನೇ ಸಾಲಿನಲ್ಲಿ ಮಾತ್ರ 18.71 ಲಕ್ಷ ಸೌರ ಮೇಲ್ಚಾವಣಿ ವ್ಯವಸ್ಥೆಗಳು ಸ್ಥಾಪನೆಯಾಗಿದ್ದು, 6.7 ಗಿಗಾವ್ಯಾಟ್ ಸೌರ ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಾಗಿದೆ. ಇದರ ಮೂಲಕ 22.71 ಲಕ್ಷ ಮನೆಗಳಿಗೆ ಪ್ರಯೋಜನ ದೊರೆತಿದೆ. ವಸತಿ ಮನೆಗಳ ಜೊತೆಗೆ ಸರ್ಕಾರಿ ಕಚೇರಿಗಳು, ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು ಸೇರಿದಂತೆ ವಾಣಿಜ್ಯ ಕಟ್ಟಡಗಳಲ್ಲಿಯೂ ಸೌರ ಮೇಲ್ಚಾವಣಿ ಅಳವಡಿಸಲು ಅವಕಾಶವಿದೆ. ಆದರೆ, ಇವುಗಳಿಗೆ ಕೇಂದ್ರ ಸರ್ಕಾರದ ಹಣಕಾಸು ಸಹಾಯ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ – ಚಿನ್ನದ ಪಲ್ಲಕ್ಕಿಯಲ್ಲಿ ಮೃತ್ತಿಕೆ ಮೆರವಣಿಗೆ
ಯೋಜನೆಯ ಲಾಭ ಪಡೆಯಲು ಆಸಕ್ತರು ಪಿಎಂ ಸೂರ್ಯಘರ್ ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ವರ್ತೂರು ಗ್ರೌಂಡ್‌ನಲ್ಲಿ ವ್ಯಕ್ತಿಯ ರುಂಡ ಪತ್ತೆ ಕೇಸ್ – ಗರ್ಲ್‌ಫ್ರೆಂಡ್‌ಗೆ ಕರೆ ಮಾಡಿ ರೈಲಿಗೆ ತಲೆಕೊಟ್ಟಿದ್ದ ಯುವಕ!
