ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳು ತಿನ್ನಲು ಏನಾದರೂ ತಿಂಡಿಯನ್ನು ಕೇಳುತ್ತಿರುತ್ತಾರೆ. ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಕಷ್ಟ. ಹೀಗಾಗಿ ಮನೆಯಲ್ಲಿ ಆಲೂಗೆಡ್ಡೆ ಇದ್ದೆ ಇರುತ್ತದೆ. ಅದರಲ್ಲಿ ಬೇಕರಿ ಶೈಲಿಯ ಆಲೂ ಚಿಪ್ಸ್ ಮಾಡಿ ಕೊಡಿ. ಆಲೂ ಚಿಪ್ಸ್ ಮಾಡುವ ವಿಧಾನ ನಿಮಗಾಗಿ…
ಬೇಕಾಗುವ ಸಾಮಗ್ರಿಗಳು
1. ಆಲೂಗಡ್ಡೆ – 2
2. ಎಣ್ಣೆ – ಕರಿಯಲು
3. ಉಪ್ಪು – ರುಚಿಗೆ ತಕ್ಕಷ್ಟು
4. ಖಾರದ ಪುಡಿ – 1/2 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಿ.
* ಮಾರುಕಟ್ಟೆಯಲ್ಲಿ ಚಿಪ್ಸ್ ಮಾಡುವ ವಿವಿಧ ಮಣೆಗಳು ಸಿಗುತ್ತವೆ. ಈ ಮಣೆ ಬಳಸಿ, ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಸ್ಲೈಸ್ ಮಾಡಿಕೊಳ್ಳಿ. ಆಲೂಗಡ್ಡೆ ತೆಳ್ಳಗೆ ಸ್ಲೈಸ್ ಮಾಡಿಕೊಂಡರೆ ಚೆನ್ನಾಗಿರುತ್ತೆ.
* ಸ್ಲೈಸ್ ಮಾಡಿದ ನಂತರ ಆಲೂಗಡ್ಡೆ ಮೇಲೆ ನೀರಿನ ಅಂಶ ಹೆಚ್ಚಿರುತ್ತೆ. ಹಾಗಾಗಿ ಸ್ಲೈಸ್ ಮಾಡಿ ಆಲೂಗಡ್ಡೆಯ ಪೀಸ್‍ಗಳನ್ನು ಸ್ವಚ್ಛವಾದ ಕಾಟನ್ ಬಟ್ಟೆಯ ಮೇಲೆ ಹಾಕಿ ಒರೆಸಬೇಕು. ಹೀಗೆ ಮಾಡಿದರೆ ಆಲೂಗಡ್ಡೆಯ ಮೇಲಿನ ನೀರಿನ ಅಂಶ ಕಡಿಮೆಯಾಗುತ್ತೆ.
* ಒಂದು ಪ್ಯಾನ್‍ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸ್ಟೌವ್ ಸ್ಲೋ ಮಾಡಿಕೊಂಡು, ಸ್ಲೈಸ್ ಮಾಡಿದ ಚಿಪ್ಸ್ ಒಂದೊಂದಾಗಿ ಹಾಕಿ ಕರಿಯಿರಿ.
* ಕರಿದ ಚಿಪ್ಸ್ ಗಳನ್ನು ಸರ್ವಿಂಗ್ ಬೌಲ್‍ಗೆ ಹಾಕಿ. ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಖಾರ ಬೆರಸಿದರೆ ಬೇಕರಿ ಶೈಲಿಯ ಆಲೂ ಚಿಪ್ಸ್ ರೆಡಿ.