ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಅಡುಗೆಯನ್ನು ತಯಾರಿಸಲು ಪ್ರತಿಯೊಬ್ಬರು ಬಯಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು. ಮಸಾಲಾ ಚಿಕನ್ ಲೆಗ್ನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್ ಲೆಗ್ಸ್ – 4
* ಕಾಳುಮೆಣಸು – 2 ಚಮಚ
* ಶುಂಠಿ – ಸ್ವಲ್ಪ
* ಬೆಳ್ಳುಳ್ಳಿ – 2
* ಮೆಣಸಿನ ಪುಡಿ- 2 ಚಮಚ
* ಚಿಕನ್ ಮಸಾಲಾ – 2 ಚಮಚ
* ಗೋಧಿ ಹಿಟ್ಟು – ಅರ್ಧ ಕಪ್
* ಅಡುಗೆ ಎಣ್ಣೆ – 2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಚಿಕನ್ ಮಸಾಲಾ- 1 ಪ್ಯಾಕೆಟ್ ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
ಮಾಡುವ ವಿಧಾನ:
* ಚಿಕನ್ ಲೆಗ್ಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ.
* ಕಾಳುಮೆಣಸು, ಶುಂಠಿ, ಮೆಣಸಿನ ಹುಡಿ, ಹಾಗೂ ಬೆಳ್ಳುಳ್ಳಿ, ಚಿಕನ್ ಮಸಾಲಾವನ್ನು ಚೆನ್ನಾಗಿ ಮಿಶ್ರಣವನ್ನು ಮಾಡಿ. ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
Advertisement
* ಚಿಕನ್ ಕಾಲುಗಳಿಗೆ ಈ ಮಸಾಲಾ ಮಿಶ್ರಣವನ್ನು ಸವರಿ ಹಾಗೂ 30 ನಿಮಿಷಗಳ ಕಾಲ ಇದನ್ನು ಹಾಗೆಯೆ ಬಿಡಿ.
* ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಅದು ಕಾಯುತ್ತಿದ್ದಂತೆ, ಗೋಧಿ ಹುಡಿಯಲ್ಲಿ ಚಿಕನ್ ಕಾಲುಗಳನ್ನು ಉರುಳಿಸಿ ಕಾದಿರುವ ಎಣ್ಣೆಗೆ ಹಾಕಿ ಮತ್ತು ಚೆನ್ನಾಗಿ ಬೇಯಿಸಿದರೆ ಚಿಕನ್ ಮಸಾಲಾ ಚಿಕನ್ ಲೆಗ್ ಸವಿಯಲು ಸಿದ್ಧವಾಗುತ್ತದೆ.