ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಟನ್, ಚಿಕನ್, ಫಿಶ್, ಮೊಟ್ಟೆ ತಿಂದು ಬೇಜಾರಾಗಿದ್ಯಾ? ಹಾಗಿದ್ದರೆ ನಾವು ಇಂದು ಹೇಳಿರುವ ಹಂದಿ ಮಾಂಸದ ಗ್ರೇವಿಯನ್ನು ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಹಂದಿ ಮಾಂಸ – 1ಕೆಜಿ
* ಒಣ ಮೆಣಸಿನಕಾಯಿಗಳು – 12
* ಬಿಸಿ ನೀರು – 2 ಕಪ್
* ಹುಣಸೆ ಹಣ್ಣಿನ ರಸ – 1ಚಮಚ
* ಅರಿಶಿಣ ಪುಡಿ – 1ಚಮಚ
* ಈರುಳ್ಳಿ – 1
* ಬೆಳ್ಳುಳ್ಳಿ – 2
* ಶುಂಠಿ- ಸ್ವಲ್ಪ
* ದಾಲ್ಚಿನಿ – 2
* ಕರಿ ಬೇವು – ಸ್ವಲ್ಪ
* ಮೆಂತ್ಯೆಕಾಳುಗಳು- ಸ್ವಲ್ಪ
* ತೆಂಗಿನ ಹಾಲು – ಅರ್ಧ ಕಪ್
* ತುಪ್ಪ- ಅರ್ಧ ಕಪ್
*ನಿಂಬೆ ರಸ – 2 ಟೀ ಸ್ಪೂನ್ ಇದನ್ನೂ ಓದಿ: ಖಾರ ಖಾರವಾದ ಕೊಡಗು ಶೈಲಿಯ ಹಂದಿ ಕರಿ ಮಾಡಿ
Advertisement
Advertisement
ಮಾಡುವ ವಿಧಾನ:
* ಒಣ ಮೆಣಸಿನಕಾಯಿಂದ ಬೀಜಗಳನ್ನು ಬೇರ್ಪಡಿಸಿ 10 ನಿಮಿಷ ಅರ್ಧ ಬಟ್ಟಲು ಬಿಸಿ ನೀರಿನಲ್ಲಿ ನೆನೆಸಿ.
* ಹುಣಸೆ ಹಣ್ಣನ್ನ ಉಳಿದಿರುವ ಬಿಸಿ ನೀರಿನಲ್ಲಿ ನೆನಸಿಟ್ಟಿರಬೇಕು.
Advertisement
* ನಂತರ ಒಣಮೆಣಸಿನಕಾಯಿ, ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ನಂತರ ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ ಹಂದಿ ಮಾಂಸ, ದಾಲ್ಚಿನ್ನಿ ಹಾಗೂ ಹುಣಸೆ ಹಣ್ಣಿನ ನೀರನ್ನು ಸೇರಿಸಿ. ಅಲ್ಲದೇ ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆ ರಸ, ತೆಂಗಿನ ಹಾಲು, ಕರಿಬೇವು, ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಬೇಯಿಸಿಕೊಳ್ಳಿ.
* ನಂತರ ಈ ಮೊದಲು ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಲು ಬಿಡಿ.
* ನಂತರ ಇನ್ನೊಂದು ಬಾಣೆಲೆಯಲ್ಲಿ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ ಹಂದಿ ಮಾಂಸ ಮಸಾಲೆಗೆ ಒಗ್ಗರಣೆ ಮಾಡಿದರೆ ರುಚಿಯಾದ ಹಂದಿ ಮಾಂಸದ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.