ಹೈದರಾಬಾದ್: ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಲವ್ವರ್ ಜೊತೆ ಸೇರಿ ಹೆತ್ತಮ್ಮನನ್ನೇ ಹತ್ಯೆ ಮಾಡಿದ ಕೊಲೆ ರಹಸ್ಯ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಮೃತ ತಾಯಿಯನ್ನು ಅಂಜು ದಾಸರಿ ರಾಮಯ್ಯ (40) ಎಂದು ಗುರುತಿಸಲಾಗಿದ್ದು, ಅವರ 16 ವರ್ಷದ ಮಗಳು ಹಾಗೂ ಆಕೆಯ ಪ್ರಿಯಕರ ಮೋಂಟಿ (22) ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯ ಬರ್ಬರ ಹತ್ಯೆ – ಶವದ ಮೇಲೆ ಕಾರು ಹಾಯಿಸಿ ವಿಕೃತಿ, ಪತಿ ವಶಕ್ಕೆ
ಪೊಲೀಸರ ಮಾಹಿತಿ ಪ್ರಕಾರ, 2025ರ ಮೇ ತಿಂಗಳಲ್ಲಿ ಅಂಜು ಅವರು ನಾಪತ್ತೆಯಾಗಿದ್ದಾರೆಂದು ಅವರ ಮಗಳು ದೂರು ದಾಖಲಿಸಿದ್ದರು. ದಿನಗಳೆದು, ತಿಂಗಳಾಗಿ ಕೊನೆಗೆ ವರ್ಷಗಳಾದರೂ ಕೂಡ ಅಂಜು ಅವರ ಬಗ್ಗೆ ಸುಳಿವೇ ಇರಲಿಲ್ಲ. ಆದರೆ ದೂರು ಕೊಟ್ಟಿದ್ದ ಮಗಳು ಮಾತ್ರ ಆರಾಮವಾಗಿ ಜೀವನ ಸಾಗಿಸುತ್ತಿದ್ದಳು. ಇದನ್ನು ಕಂಡ ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ವರ್ಷದ ಬಳಿಕ ಸಾವಿನ ರಹಸ್ಯ ಬಯಲು:
ವಿಚಾರಣೆ ಬಳಿಕ ಪೊಲೀಸರು ಅಂಜು ಅವರ ಶವವನ್ನು ಅವರ ಮನೆಯ ಬೆಡ್‌ರೂಮಿನಲ್ಲೇ ಪತ್ತೆಹಚ್ಚಿದ್ದಾರೆ. ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಕೊಲೆ ಮಾಡಿದ್ದಾಗಿ ಮೃತಳ ಮಗಳು ಹಾಗೂ ಆಕೆಯ ಪ್ರಿಯಕರ ಒಪ್ಪಿಕೊಂಡಿದ್ದಾರೆ. ಆರೋಪಿ ಮೋಂಟಿ ಟ್ರಕ್ ಚಾಲಕನಾಗಿದ್ದು, ಮಗಳು ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಅವರಿಬ್ಬರ ಪ್ರೀತಿಯನ್ನು ತಾಯಿ ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಹತ್ತೆಮ್ಮನನ್ನೇ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೊಲೆ ಬಳಿಕ ಶವವನ್ನು ಮನೆಯಲ್ಲಿ ಹೂತಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ನಂತರ ಆರೋಪಿಗಳಿಬ್ಬರು ಮದುವೆಯಾಗಿದ್ದು, ಅವರಿಗೆ ಎರಡು ತಿಂಗಳ ಮಗುವಿದೆ. ಇನ್ನೂ ನೆರೆಹೊರೆಯವರ ಮಾಹಿತಿ ಪ್ರಕಾರ, ನಿಜಕ್ಕೂ ಇದನ್ನು ನಂಬೋಕೆ ಆಗ್ತಿಲ್ಲ. ತನ್ನ ತಾಯಿಯ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಅವಳು ಆರಾಮಾಗಿ ಜೀವನ ನಡೆಸಲು ಹೇಗೆ ಸಾಧ್ಯ? ಅಲ್ಲದೇ ಅವಳ ಮುಖದಲ್ಲಿಯೂ ಪಶ್ಚಾತಾಪದ ಲಕ್ಷಣಗಳು ಕಾಣುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ಶವವನ್ನು ಹೊರತೆಗೆಯುತ್ತಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಐದು ವರ್ಷಗಳ ಹಿಂದೆಯೇ ಅಂಜು ಹಾಗೂ ಅವರ ಪತಿ ಬೇರೆಯಾಗಿದ್ದರು. ಅವರ ಪತಿ ಬೇರೆ ಮದುವೆಯಾಗಿ ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ.ಇದನ್ನೂ ಓದಿ: ಕ್ಲಾಸ್ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್ – ಚಪ್ಪಲಿ ಏಟು ತಿಂದ ಪ್ರೊಫೆಸರ್



