ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಯಾವುದೇ ಹಬ್ಬ-ಹರಿದಿನ ಅಥವಾ ಅತಿಥಿಗಳು ಮನೆಗೆ ಭೇಟಿಕೊಟ್ಟಾಗ ಸಿದ್ಧಪಡಿಸಬಹುದು. ಸರಳವಾಗಿ ಶೇಂಗಾನಿಂದ ಉಂಡೆ ಹೇಗೆ ತಯಾರು ಮಾಡುವುದು ಎನ್ನುವ ವಿಧಾನ ಈ ಕೆಳಗಿನಂತಿದೆ.
ಬೇಕಾಗುವ ಸಾಮಗ್ರಿಗಳು:
* ಶೇಂಗಾ- 2 ಕಪ್
* ಎಳ್ಳು- ಅರ್ಧ ಕಪ್
* ಅವಲಕ್ಕಿ – ಅರ್ಧ ಕಪ್
* ಒಣಕೊಬ್ಬರಿ- ಅರ್ಧ ಕಪ್
* ಬೆಲ್ಲ- 1 ಕಪ್
* ಏಲಕ್ಕಿ- ಸ್ವಲ್ಪ
* ತುಪ್ಪ – ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಶೇಂಗಾ, ಎಳ್ಳು, ಒಣಕೊಬ್ಬರಿ, ಅವಲಕ್ಕಿಯನ್ನು ಬೇರೆ, ಬೇರೆಯಾಗಿ ಗರಿಗರಿಯಾಗುವರೆಗೆ ಹುರಿದುಕೊಳ್ಳಬೇಕು.
* ಮಿಕ್ಸಿ ಜಾರಿಗೆ ಶೇಂಗಾ, ಎಳ್ಳು, ಅವಲಕ್ಕಿ, ಒಣಕೊಬ್ಬರಿ ಹಾಕಿ ಪುಡಿ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
Advertisement
Advertisement
* ಪುಡಿ ಮಾಡಿದ ಮಿಶ್ರಣಕ್ಕೆ ಬೆಲ್ಲದಪುಡಿ, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಕೊಳ್ಳಿ.
* ತಯಾರಿಸಿದ ಪುಡಿಯನ್ನು ಬೌಲಿಗೆ ಹಾಕಿ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಮಾಡಿದರೆ ರುಚಿಯಾದ ಶೇಂಗಾ ಉಂಡೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ