ಮಕ್ಕಳಿಗಂತೂ ನೂಡಲ್ಸ್ ಅಂದರೆ ಪಂಚಪ್ರಾಣ. ಕೆಲಸಕ್ಕೆ ಹೋಗುವ ತಾಯಂದಿರು ನೂಡಲ್ಸ್ ಅನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅತ್ಯಂತ ಸರಳವಾಗಿ ರುಚಿಯಾಗಿ ಬೇಗ ತಯಾರಿಸುವ ಅಡುಗೆಯನ್ನು ತಾಯಂದಿರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ನೂಡಲ್ಸ್ ಕಟ್ಲೆಟ್ ಮಕ್ಕಳಿಗೆ ಇಷ್ಟವಾಗುವುದು ಖಂಡಿತ. ಹಾಗಿದ್ದರೆ ನಿಮ್ಮ ಮಕ್ಕಳ ಹಸಿವನ್ನು ತಣಿಸುವ ರುಚಿಕರವಾದ ನೂಡಲ್ಸ್ ಖಾದ್ಯ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ನೂಡಲ್ಸ್ – 150 ಗ್ರಾಮ್ಸ್
* ತರಕಾರಿ – ಅರ್ಧ ಕಪ್
* ಬಟಾಣಿ – ಅರ್ಧ ಕಪ್
* ಈರುಳ್ಳಿ – ಅರ್ಧ ಕಪ್
* ಹಸಿಮೆಣಸು – 4
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಚಾಟ್ ಮಸಾಲಾ – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 1 ಕಪ್
Advertisement
ಮಾಡುವ ವಿಧಾನ:
* ಕುದಿಯುತ್ತಿರುವ ನೀರಿನಲ್ಲಿ ನೂಡಲ್ಸ್ ಹಾಕಿ ತೆಗೆದಿಟ್ಟುಕೊಳ್ಳಬೇಕು.
* ಪಾತ್ರೆಯಲ್ಲಿ ಬೇಯಿಸಿದ ತರಕಾರಿ, ನೂಡಲ್ಸ್, ಬಟಾಣಿ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲೆ, ಕಾರ್ನ್ ಫ್ಲೋರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
Advertisement
Advertisement
* ಈಗ ಈ ಮಿಶ್ರಣವನ್ನು ನಿಮ್ಮ ಹಸ್ತವನ್ನು ಬಳಸಿಕೊಂಡು ಕಟ್ಲೆಟ್ ಆಕಾರವನ್ನು ನೂಡಲ್ಸ್ ಅನ್ನು ಮಾಡಿಕೊಳ್ಳಿ. ಇದನ್ನು ಚಪ್ಪಟೆ ಆಕಾರದಲ್ಲಿ ತಟ್ಟಿಕೊಳ್ಳಿ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಬಿಸಿ ಎಣ್ಣೆಗೆ ನೂಡಲ್ ಕಟ್ಲೆಟ್ ಅನ್ನು ಹಾಕಿ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಬೇಯಿಸಿಕೊಳ್ಳಬೇಕು. ಈಗ ನೂಡಲ್ಸ್ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ. ನೀವು ಟೊಮೆಟೋ ಸಾಸ್ ಅನ್ನು ಬಳಸಿಕೊಂಡು ಈ ಆರೋಗ್ಯಕರ ಹಾಗೂ ರುಚಿಕರವಾದ ಖಾದ್ಯವನ್ನು ಸವಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್