ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್‌ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಹರಿಯಾಲಿ ಪನೀರ್ ಟಿಕ್ಕಾವನ್ನು ಮನೆಯಲ್ಲಿ ಮಾಡಿ ಸವಿಯಿರಿ. ಇದು ಪುದಿನಾ ಮತ್ತು ಕೊತ್ತಂಬರಿ ಸೊಪ್ಪಿನ ಪರಿಮಳವನ್ನು ಹೊಂದಿದ್ದು, ಆರೋಗ್ಯಕರ ಮತ್ತು ಸಖತ್ ಟೇಸ್ಟ್ ಆಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
* ಮೊಸರು – 1ಕಪ್
* ಅರಿಶಿಣ- 1 ಚಮಚ
* ದನಿಯಾ ಪೌಡರ್- 1 ಚಮಚ
* ಜೀರಾ ಪೌಡರ್- 1 ಚಮಚ
* ಗರಂ ಮಸಾಲಾ- 1 ಚಮಚ
* ಕಸೂರಿ ಮೇಥಿ – ಸ್ವಲ್ಪ
* ಚಾಟ್ ಮಸಾಲಾ- ಸ್ವಲ್ಪ
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
* ಕಡಲೆ ಹಿಟ್ಟು (ಒಣ ಹುರಿದ)- 2 ಚಮಚ
* ನಿಂಬೆ ರಸ- 1ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಟಡುಗೆ ಎಣ್ಣೆ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಪುದೀನ ಎಲೆಗಳು- ಸ್ವಲ್ಪ
* ಹಸಿ ಮೆಣಸಿನಕಾಯಿ- 4 ರಿಂದ 6
* ಈರುಳ್ಳಿ -1
* ಕ್ಯಾಪ್ಸಿಕಮ್-1
* ಪನೀರ್- 2 ಕಪ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು, ಅರಶಿಣ ಪೌಡರ್, ಕೊತ್ತಂಬರಿ ಪೌಡರ್, ಜೀರಾ ಪುಡಿ, ಗರಮ್ ಮಸಾಲಾ, ಕಸೂರಿ ಮೇಥಿ, ಚಾಟ್ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್,ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
Advertisement
* ನಂತರ ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಪುದೀನ ಎಲೆ, ಹಸಿರು ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಬೇಕು. ಈಗ ತಯಾರಾದ ಹಸಿರು ಚಟ್ನಿಗೆ ನಿಂಬೆ ರಸ, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿಟ್ಟುಕೊಳ್ಳಿ.
Advertisement
* ರುಬ್ಬಿದ ಮಸಾಲೆಗಳು ಮೊಸರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ, ಕ್ಯಾಪ್ಸಿಕಂ, ಪನೀರ್ ಸೇರಿಸಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಮಸಾಲೆಯಲ್ಲಿ ಚೆನ್ನಾಗಿ ಮಿಶ್ರಣವಾದ ಪನೀರ್, ಕ್ಯಾಪ್ಸಿಕಂ, ಈರುಳ್ಳಿಗಳನ್ನು ಒಂದು ಕಡ್ಡಿಗೆ ಚುಚ್ಚಿ
* ನಂತರ ಒಂದು ತವಾಗೆ ಅಡುಗೆ ಎಣ್ಣೆಯನ್ನು ಕಾಹಿ ಬಿಸಿ ಮಾಡಿ.