ಬಿಸಿ ಬಿಸಿಯಾದ ಎಗ್ ಫ್ರೈಡ್ ರೈಸ್ ಮಾಡುವ ವಿಧಾನ ನಿಮಗಾಗಿ

Public TV
2 Min Read
egg fried rice 1

ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಎಗ್ ಫ್ರೈಡ್ ರೈಸ್ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಬೀದಿ ಬದಿಯ ಅಂಗಡಿಯಲ್ಲಿ ಚಳಿಗಾಲದಲ್ಲಿ ಎಗ್ ಫ್ರೈಡ್ ರೈಸ್ ಸವಿಯುವ ಮಜವೇ ಬೇರೆ ಎಂದು ಆಹಾರ ಪ್ರಿಯರು ಹೇಳುತ್ತಾರೆ. ಆದರೆ ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಇನ್ನೂ ಚೆನ್ನಾಗಿರುತ್ತದೆ. ಎಗ್ ಫ್ರೈಡ್ ರೈಸ್ ಮಾಡುವುದು ಸುಲಭವಾಗಿದೆ. ಅದಕ್ಕೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಎಗ್ ಫ್ರೈಡ್ ರೈಸ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

egg fried rice

ಬೇಕಾಗುವ ಸಾಮಗ್ರಿಗಳು:
* ಅನ್ನ – 2 ಕಪ್
* ಎಲೆಕೋಸು – ಅರ್ಧ ಕಪ್
* ಕ್ಯಾರೆಟ್- ಅರ್ಧ ಕಪ್
* ಈರುಳ್ಳಿ- 2
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಹಸಿಮೆಣಸು-1
* ರುಚಿಗೆ ತಕ್ಕಷ್ಟು ಉಪ್ಪು
* ಖಾರದಪುಡಿ- ಅರ್ಧ ಚಮಚ
* ಗರಂಮಸಾಲೆ – 1 ಚಮಚ
* ವಿನೆಗರ್- 1 ಚಮಚ
* ಕಾಳುಮೆಣಸಿನ ಪುಡಿ- 1 ಚಮಚ
* ಟೊಮೆಟೊ ಸಾಸ್- 1 ಚಮಚ
* ಗ್ರೀನ್‍ಚಿಲ್ಲಿ ಸಾಸ್ – 1 ಚಮಚ
* ಸೋಯಾ ಸಾಸ್ – 1 ಚಮಚ
* ಮೊಟ್ಟೆ – 4
* ಅಡುಗೆ ಎಣ್ಣೆ – ಅರ್ಧ ಕಪ್ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

egg fried rice 2

ಮಾಡುವ ವಿಧಾನ:
* ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಎಲೆಕೋಸು ಹಾಕಿ ಹುರಿದು ಬದಿಗೆ ತೆಗೆದಿಟ್ಟುಕೊಳ್ಳಬೇಕು.
* ನಂತರ ಅದೇ ಪಾತ್ರೆಗೆ ಒಡೆದ ಮೊಟ್ಟೆ ಹಾಕಿ. ಮೊಟ್ಟೆಯನ್ನು ಆಮ್ಲೆಟ್‍ಗೆ ಬೇಯಿಸುವಂತೆ ಅರ್ಧ ಬೇಯಿಸಿಕೊಳ್ಳಿ.

egg fried rice 3

* ಅದೇ ಎಣ್ಣೆಗೆ ಕ್ಯಾರೆಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಹಾಗೂ ಈಗಾಲೇ ಹುರಿದ ಎಲೆಕೋಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ
* ಅದಕ್ಕೆ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೋ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಅನ್ನ ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಮತ್ತು ಬಿಸಿಯಾದ ಎಗ್ ಫ್ರೈಡ್ ರೈಸ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ

Share This Article
Leave a Comment

Leave a Reply

Your email address will not be published. Required fields are marked *